ಕೊಚ್ಚಿ: ಇಡಪ್ಪಳ್ಳಿಯಲ್ಲಿನ ನಿವೃತ್ತ ಅಧ್ಯಾಪಿಕೆಯ ಸಾವು ಕೊಲೆ ಕೃತ್ಯವೆಂದು ಶಂಕಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೋನೇಕರ ನಿವಾಸಿ ವನಜ (70) ಸಾವಿಗೀಡಾದ ಮಹಿಳೆ. ಶುಕ್ರವಾರ ರಾತ್ರಿ ವನಜ ನಿಗೂಢವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದೇಹದಲ್ಲಿ ಗಾಯಗಳಿತ್ತೆನ್ನಲಾಗಿದೆ. ಮಲಗುವ ಕೊಠಡಿಯಲ್ಲಿ ರಕ್ತ ಕಂಡುಬಂದಿದೆ. ಮೃತದೇಹದ ಸಮೀಪದಲ್ಲೇ ಒಂದು ಕತ್ತಿಯನ್ನು ಕೂಡಾ ಪತ್ತೆಹಚ್ಚಲಾಗಿದೆ. ಪ್ರಾಥಮಿಕ ತಪಾಸಣೆಯಲ್ಲಿ ಕೊಲೆಕೃತ್ಯ ವೆಂದು ಶಂಕಿಸುತ್ತಿರುವುದಾಗಿ ಎಳಮಕ್ಕರ ಪೊಲೀಸರು ತಿಳಿಸಿದ್ದಾರೆ. ಶ್ವಾನದಳ ರಾತ್ರಿಯೇ ಸ್ಥಳಕ್ಕೆ ತಲುಪಿದೆ. ಸಮೀಪದ ಸಿಸಿ ಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆಯು ವಾಗ ಮನೆಯಲ್ಲಿ ವನಜ ಮಾತ್ರವೇ ಇದ್ದರೆನ್ನಲಾಗಿದೆ. ದೈಹಿಕವಾಗಿ ಅಸ್ವಸ್ಥರಾ ಗಿದ್ದ ಇವರು ಇತ್ತೀಚೆಗಿನಿಂದ ಹೊರಗೆಲ್ಲೂ ತೆರಳುತ್ತಿರಲಿಲ್ಲವೆನ್ನಲಾಗಿದೆ. ಇವರ ಪತಿ ವಾಸು ಈ ಹಿಂದೆ ನಿಧನರಾಗಿದ್ದಾರೆ.







