75 ದಶಲಕ್ಷ ಯೂನಿಟ್‌ಗೇರಿದ ವಿದ್ಯುತ್ ಉಪಯೋಗ

ಕಾಸರಗೋಡು: ರಾಜ್ಯದಲ್ಲಿ ಪ್ರತಿದಿನ ವಿದ್ಯುತ್ ಉಪಯೋಗ ಈಗ 95 ದಶಲಕ್ಷ ಯೂನಿಟ್‌ಗೇರಿದೆ. ಸಾಧಾರಣವಾಗಿ ಫೆಬ್ರವರಿ ತಿಂಗಳಲ್ಲಿ ವಿದ್ಯುತ್ ಬಳಕೆ ಇಷ್ಟರ ಮಟ್ಟಿಗೇರಿ ರುವುದು ಇದೇ ಪ್ರಥಮವಾಗಿದೆ. ಈ ಮಧ್ಯೆ ಬೇಸಿಗೆ ಮಳೆ ಸುರಿದಲ್ಲಿ ವಿದ್ಯುತ್ ಬಳಕೆ ಇಳಿಯಬಹುದೆಂದು ವಿದ್ಯುನ್ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ.

ಇನ್ನು ಮಾರ್ಚ್ ತಿಂಗಳಿಂದ ಬೇಸಿಗೆಕಾಲ ಆರಂಭಗೊಳ್ಳತೊ ಡಗಿದ್ದು, ಆ ವೇಳೆ ದೈನಂದಿನ ವಿದ್ಯುತ್ ಉಪಯೋಗ ಇನ್ನಷ್ಟು ತಾರಕಕ್ಕೇರಲಿದೆ.  ಕಳೆದ ವರ್ಷ ಮೇ 3ರಂದು ರಾಜ್ಯದಲ್ಲಿ 115.995 ದಶಲಕ್ಷ ಯೂನಿಟ್ ವಿದ್ಯುತ್ ಉಪಯೋಗಿಸಲಾಗಿದ್ದು, ಇದು ಇಡೀ ರಾಜ್ಯದಲ್ಲೇ ಗರಿಷ್ಠ ದಾಖಲೆಯಾಗಿದೆ.  ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉಪಯೋಗಿಸಲಾಗುತ್ತಿದೆ. ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು  ಖರೀದಿಸುವವರ  ಸಂಖ್ಯೆಯೂ ದಿನೇ ದಿನೇ ಹೆಚ್ಚಾಗು ತ್ತಿದ್ದು, ಅದೂ ವಿದ್ಯುತ್ ಉಪಯೋಗ ಇನ್ನಷ್ಟು ಹೆಚ್ಚಾಗುವಂತೆ ಮಾಡಿಕೊಟ್ಟಿದೆ.

ರಾಜ್ಯದ ಜಲವಿದ್ಯುತ್ ಯೋಜನೆಗಳ ಅಣೆಕಟ್ಟುಗಳಲ್ಲಿ ಈಗ ಶೇ. ೫೭ರಷ್ಟು ನೀರು ಮಾತ್ರವೇ ಉಳಿದುಕೊಂಡಿದೆ. ಈ ಮಧ್ಯೆ ಧಾರಾಕಾರ ಬೇಸಿಗೆ ಮಳೆ ಸುರಿದಲ್ಲಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಏರಬಹುದು ಮಾತ್ರವಲ್ಲ ವಿದ್ಯುತ್ ಉಪಯೋಗವೂ ಇಳಿಯಲು ಅದು ದಾರಿಮಾಡಿಕೊಡಲಿದೆ. ಬೇಸಿಗೆ ಮಳೆ ಸುರಿಯದಿದ್ದಲ್ಲಿ ಅಗತ್ಯದಷ್ಟು ವಿದ್ಯುತ್  ದುಂದು ವೆಚ್ಚ ನೀಡಿ ಹೊರಗಿನಿಂದ ಖರೀದಿಸಬೇಕಾಗಿ ಬರಲಿದೆ. ಹಾಗೆ ನಡೆದಲ್ಲಿ ಅದರಿಂದ ವಿದ್ಯುನ್ಮಂಡಳಿಗೆ ಉಂಟಾಗುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸೆಸ್ ರೂಪದಲ್ಲಿ ವಿದ್ಯುತ್ ಬಳಕೆದಾರರೇ ವಸೂಲಿ ಮಾಡಬೇಕಾಗಿ ಬರಲಿದೆ.

Leave a Reply

Your email address will not be published. Required fields are marked *

You cannot copy content of this page