9 ಲಕ್ಷದ ಸೋಲಾರ್ ಬೇಲಿ ಕಾಡಾನೆಗಳಿಂದ ನಾಶ

ಮುಳ್ಳೇರಿಯ: ಕಾನತ್ತೂರು ಮೂಡಯಂವೀಡ್ ಎಂಬಲ್ಲಿ ನಾಗರಿಕರು ಒಂಭತ್ತ್ತು ಲಕ್ಷ ರೂಪಾಯಿಂದ ನಿರ್ಮಿಸಿದ ಸೋಲಾರ್ ಬೇಲಿಯನ್ನು ಕಾಡಾನೆಗಳು ನಾಶಗೊಳಿಸಿವೆ. ಕಾಡಾನೆಗಳ ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ 9 ತಿಂಗಳ ಹಿಂದೆ ನಾಗರಿಕರು ಹಣ ಸಂಗ್ರಹಿಸಿ 8 ಲಕ್ಷ ರೂ. ಖರ್ಚು ಮಾಡಿ ಸೋಲಾರ್ ಬೇಲಿ ನಿರ್ಮಿಸಿದರು. ಅದನ್ನು ನಿನ್ನೆ ಮುಂಜಾನೆ ತಲುಪಿದ ಕಾಡಾನೆಗಳು ನಾಶಗೊಳಿಸಿವೆ. ಕಾನತ್ತೂರು, ಕೂಡಾಲ, ಪಯಂ ಎಂಬಿಡೆಗಳಲ್ಲಿ ಎರಡು ಕಾಡಾನೆಗಳು ಕಳೆದ ಕೆಲವು ದಿನಗಳಿಂದ ವ್ಯಾಪಕ ಕೃಷಿ ನಾಶಗೊಳಿಸುತ್ತಿರುವುದಾಗಿ ದೂರಲಾಗಿದೆ.

You cannot copy contents of this page