9 ವರ್ಷ ಹಿಂದೆ ಮದುವೆ: ಈಗ ಪತ್ನಿಗೆ ಸೌಂದರ್ಯವಿಲ್ಲವೆಂದು ತಿಳಿಸಿ ಕಿರುಕುಳ; ಪತಿ ವಿರುದ್ಧ ಕೇಸು
ಕಾಸರಗೋಡು: ಒಂಭತ್ತು ವರ್ಷಗಳ ಹಿಂದೆ ವಿವಾಹಿತೆ ಯಾದ ಯುವತಿಗೆ ಈಗ ಸೌಂದರ್ಯವಿಲ್ಲ ವೆಂದು ತಿಳಿಸಿ ಶಾರೀರಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದಂತೆ ಪತಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. 28ರ ಹರೆಯದ ಯುವತಿಯ ದೂರಿನಂತೆ ಪತಿ ಕಡುಮೇನಿ ನಿವಾಸಿ ಪ್ರಿನ್ಸ್ ಜೋಸೆಫ್ ಎಂಬಾತನ ವಿರುದ್ಧ ಚಿಟ್ಟಾರಿಕಲ್ ಪೊಲೀಸರು ಕೇಸು ದಾಖಲಿಸಿದ್ದಾರೆ. ದೂರುದಾತೆ ಯುವತಿ ಹಾಗೂ ಪ್ರಿನ್ಸ್ ಜೋಸೆಫ್‌ರ ಮದುವೆ 2016 ಜೂನ್ 20ರಂದು ನಡೆದಿತ್ತು. ಬಳಿಕ ಯುವತಿ ಪತಿಯ ಮನೆಯಲ್ಲೂ ಹಾಗೂ ಗೋವಾದಲ್ಲೂ ವಾಸಿ ಸುತ್ತಿದ್ದಳು. ಈ ಮಧ್ಯೆ ಪತ್ನಿಗೆ ಸೌಂದರ್ಯವಿಲ್ಲವೆಂದು ತಿಳಿಸಿ ಪತಿ ಶಾರೀರಿಕ ಹಾಗೂ ಮಾನಸಿಕ ವಾಗಿ ಕಿರುಕುಳ ನೀಡಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.