ಕಾರು ಬಾವಿಗೆ ಬಿದ್ದು 6 ಮಕ್ಕಳ ಸಹಿತ 9 ಮಂದಿ ಮೃತ್ಯು

ನಾಸಿಕ್: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಪಕ್ಕದ ಬಾವಿಗೆ ಬಿದ್ದು ಕಾರಿನಲ್ಲಿದ್ದ ಒಂದೇ ಕುಟುಂಬದ ಐದು ಮಂದಿ ಸೇರಿದಂತೆ ಒಟ್ಟು 9 ಮಂದಿ ಸಾವನ್ನಪ್ಪಿದ  ಹೃದಯ ವಿದ್ರಾವಕ ಘಟನೆ ನಿನ್ನೆ ತಡರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದಿಂಡೋರಿ ಶಿವಾಜಿನಗರದಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಕಾರು ನಿನ್ನೆ ತಡರಾತ್ರಿ ಶಿವಾಜಿನಗರದ ದಿಂಡೋರಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಅದು ದಿಢೀರ್ ನಿಯಂತ್ರಣ  ತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜು ರಾಜೀವ ಎಂಬವರ  ಬಾವಿಗೆ ಬಿದ್ದಿದ್ದು  ಅದು ಭಾರೀ ಆಳದ  ಆ ಬಾವಿಯ ಅಡಿಭಾಗದಲ್ಲಿ ಕಾರು ಸಿಲುಕಿಕೊಂಡಿತು. ಮಾಹಿತಿ ತಿಳಿದ ಸ್ಥಳೀಯ ನಾಗರಿಕರು, ಪೊಲೀಸರು ಮತ್ತು ಅಗ್ನಿಶಾಮಕದಳ ಸ್ಥಳಕ್ಕಾ ಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಕಾರಿನಲ್ಲಿದ್ದವರ  ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ದಟ್ಟವಾದ ಕತ್ತಲೆ ಆವರಿಸಿದ್ದುದರಿಂದ ಬಾವಿಯಲ್ಲಿದ್ದ ಕಾರು ಮತ್ತು ಅದರಲ್ಲಿ ಸಿಲುಕಿಕೊಂಡವರನ್ನು ಹೊರತೆಗೆಯಲು ಪೊಲೀಸರು, ಇತರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು.

RELATED NEWS

You cannot copy contents of this page