ಸಿಲ್ವರ್ ಲೈನ್ ರೈಲು ಯೋಜನೆ: ನಮ್ಮ ಭೂಮಿ ಬಿಟ್ಟು ಕೊಡುವ ವಿಷಯದಲ್ಲಿ ತೀರ್ಮಾನವಾಗಿಲ್ಲ-ರೈಲ್ವೇ
ಕಾಸರಗೋಡು: ಕಾಸರಗೋಡಿ ನಿಂದ ತಿರುವನಂತಪುರ ತನಕದ ಸಿಲ್ವರ್ ಲೈನ್ ಹೈಸ್ಪೀಡ್ ರೈಲು ಯೋಜನೆಗೆ ನಮ್ಮ ಭೂಮಿಯನ್ನು ಬಿಟ್ಟುಕೊಡುವ ವಿಷಯದಲ್ಲಿ ಈತನಕ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲವೆಂದು ದಕ್ಷಿಣರೈಲ್ವೇ ವಿಭಾಗ ಸ್ಪಷ್ಟಪಡಿಸಿದೆ.
ಭಾರತೀಯ ರೈಲ್ವೇಯ ಭವಿಷ್ಯದ ಅಭಿವೃದ್ಧಿ ಯೋಜನೆ ಯನ್ನು ಗಣನೆಗೆ ತೆಗೆದುಕೊಳ್ಳದೆ ಸಿಲ್ವರ್ ಲೈನ್ ಯೋಜನೆಗಾಗಿ ಕೇರಳ ಸರಕಾರ ಕೆ-ರೈಲು ಎಂಬ ಸಂಸ್ಥೆಗೆ ರೂಪು ನೀಡಿದೆ. ಈ ಯೋಜನೆಗಾಗಿ ಕೆ-ರೈಲು ನಡೆಸಿದ ಸರ್ವೇ ಭೂಮಿಯಲ್ಲಿ ರೈಲ್ವೇ ಇಲಾಖೆಯ ಮಾತ್ರವಲ್ಲ ಅರಣ್ಯ ಭೂಮಿಯೂ ಒಳಗೊಂಡಿದೆ. ಸರ್ವೇ ನಡೆಸುವ ವಿಷಯವನ್ನು ರೈಲ್ವೇ ಇಲಾಖೆಗೆ ಮುಂಗಡವಾಗಿ ತಿಳಿಸದೆ ಸರ್ವೇ ನಡೆಸಿದ ಬಳಿಕವಷ್ಟೇ ಅದರ ವರದಿಯನ್ನು ನಮಗೆ ಸಲ್ಲಿಸಲಾಗಿದೆಯೆಂದೂ ರೈಲ್ವೇ ಇಲಾಖೆ ತಿಳಿಸಿದೆ. ಅದಕ್ಕೆ ನಾವು ಅಂದೇ ತೀವ್ರ ವಿರೋಧ ವ್ಯಕ್ತಪಡಿಸಿದ್ದೆವು. ರೈಲ್ವೇ ಇಲಾಖೆಗೆ ಸೇರಿದ ೧೦೭೦.೮೦ ಹೆಕ್ಟೇರ್ ಭೂಮಿಯನ್ನು ಸಿಲ್ವರ್ ಲೈನ್ ಯೋಜನೆಗಾಗಿ ಬಿಟ್ಟುಕೊಡುವಂತೆ ಕೆ-ರೈಲು ಕೇಳಿಕೊಂಡಿತ್ತು. ಆದರೆ ಈ ವಿಷಯದಲ್ಲಿ ಯಾವುದೇ ತೀರ್ಮಾನ ಈತನಕ ಕೈಗೊಳ್ಳಲಾಗಿಲ್ಲವೆಂದು ದಕ್ಷಿಣ ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.