ಪಾರ್ಕ್ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ: ಕೇಂದ್ರ ವಿ.ವಿಯ ವಿವಾದಿತ ಅಧ್ಯಾಪಕನ ಬಂಧನ
ಕಣ್ಣೂರು: ಕೇಂದ್ರ ವಿಶ್ವವಿದ್ಯಾ ನಿಲಯದ ಅಧ್ಯಾಪಕನಾದ ಡಾ. ಇಫ್ತಿಕರ್ ಅಹಮ್ಮದ್ (30)ರನ್ನು ಮಹಿಳೆಯರ ವಿರುದ್ಧ ಅತಿಕ್ರಮ ತಡೆಯುವಿಕೆ ಕಾನೂನು ಪ್ರಕಾರ ಬಂಧಿಸಿ ಜೈಲಿಗೆ ಕಳುಹಿಸಲಾ ಯಿತು. ನಿನ್ನೆ ಸಂಜೆ ತಳಿಪರಂಬ ಪೊಲೀಸರು ಬಂಧಿಸಿದ ಇವರನ್ನು ಕಣ್ಣೂರು ಸೆಂಟ್ರಲ್ ಜೈಲ್ನಲ್ಲಿ ರಿಮಾಂಡ್ನಲ್ಲಿ ರಿಸಲಾಗಿದೆ.
ಡಾ. ಇಫ್ತಿಕರ್ ಅಹಮ್ಮದ್ ಪಳೆಯಂಗಾಡಿ ಎರಿಪುರಂ ನಿವಾಸಿಯಾಗಿದ್ದಾರೆ. ಪರಶ್ಶಿನಿಕಡವಿನ ವಾಟರ್ ಥೀಂ ಪಾರ್ಕ್ನಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಪಾರ್ಕ್ನ ‘ವೇವ್ಪೂಲ್’ನಲ್ಲಿ ಸ್ನಾನ ಮಾಡುತ್ತಿದ್ದ 22ರ ಹರೆಯದ ಯುವತಿಯೊಂದಿಗೆ ಇವರು ಅನುಚಿತವಾಗಿ ವರ್ತಿಸಿದ್ದು, ಅಲ್ಲದೆ ಆಕೆಯನ್ನು ಬಿಗಿದಪ್ಪಿಕೊಂಡಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಯುವತಿ ಬೊಬ್ಬೆ ಹಾಕಿದಾಗ ಪಾರ್ಕ್ನ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ತಳಿಪರಂಬ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಿಸಿದ್ದು, ಈ ವೇಳೆಯೂ ಯುವತಿ ದೂರಿನಲ್ಲಿ ದೃಢವಾಗಿ ನಿಂತಿದ್ದಾಳೆ. ತಾನು ಕೇಂದ್ರ ವಿಶ್ವವಿದ್ಯಾಲಯದ ಅಧ್ಯಾಪಕನಾಗಿ ದ್ದೇನೆಂದು ತಿಳಿಸಿ ಇಫ್ತಿಕರ್ ಅಹಮ್ಮದ್ ಪ್ರಕರಣದಿಂದ ಜಾರಿಕೊಳ್ಳಲು ಪ್ರಯತ್ನಿಸಿದ್ದರೂ ಯುವತಿ ದೂರಿನಿಂದ ಹಿಂಜರಿಯಲು ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಜಾಮೀನು ರಹಿತ ಕಾಯ್ದೆ ಪ್ರಕಾರ ಕೇಸು ದಾಖಲಿಸಿ ಇಫ್ತೀಕರ್ ಅಹಮ್ಮದ್ರ ಬಂಧಿಸಿ ಮೆಜಿಸ್ಟ್ರೇಟ್ನ ಮುಂದೆ ಹಾಜರುಪಡಿಸಿದ್ದು ಈ ವೇಳೆ ರಿಮಾಂಡ್ ವಿಧಿಸಲಾಗಿದೆ.
೨೦೧೬ರಲ್ಲಿ ಪೆರಿಯಾದಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಇಂಗ್ಲಿಷ್ ವಿಭಾಗ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಉದ್ಯೋಗಕ್ಕೆ ಸೇರಿಕೊಂಡ ಇಫ್ತೀಕರ್ ಅಹಮ್ಮದ್ ಇದಕ್ಕಿಂತ ಮೊದಲು ಅಮಾನತಿಗೊ ಳಗಾಗಿದ್ದು, ಅಲ್ಲದೆ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡ ವ್ಯಕ್ತಿ ಯಾಗಿದ್ದಾರೆ. ತರಗತಿಯಲ್ಲಿ ಕುಸಿದು ಬಿದ್ದ ವಿದ್ಯಾರ್ಥಿನಿಯೊಂದಿಗೆ ಅನುಚಿತ ವಾಗಿ ವರ್ತಿಸಿದ್ದಾರೆಂಬ ದೂರಿನಂತೆ ವಿಶ್ವವಿದ್ಯಾನಿಲಯ ತನಿಖೆ ನಡೆಸಿತ್ತು. ದೂರಿನ ಹಿನ್ನೆಲೆಯಲ್ಲಿ ಇಪ್ತಿಕರ್ ಅಹಮ್ಮದ್ ರನ್ನು ಅಮಾನತುಗೈಯ್ಯ ಲಾಗಿತ್ತು. ಆದರೆ ಶೀಘ್ರದಲ್ಲೇ ಇವರು ಸೇವೆಗೆ ಮರಳಿ ಸೇರ್ಪಡೆಗೊಂಡಾಗ ವಿದ್ಯಾರ್ಥಿನಿಯರು ಚಳವಳಿಗೆ ಮುಂ ದಾಗಿದ್ದು,ಈ ಹಿನ್ನೆಲೆಯಲ್ಲಿ ಅಮಾನತು ಕ್ರಮವನ್ನು ಮುಂದುವರಿಸಲಾಗಿತ್ತು. ಅನಂತರ ಇತ್ತೀಚೆಗಷ್ಟೇ ಇವರು ಮರಳಿ ಸೇವೆಗೆ ಸೇರ್ಪಡೆಗೊಂಡಿದ್ದರು.