ಮುಂದಿನ ತೀರ್ಥಾಟನಾ ಋತುವಿನಿಂದ ಶಬರಿಮಲೆಯಲ್ಲಿ ಏಲಕ್ಕಿ ಬೆರೆಸಿದ ಅರವಣ ಪ್ರಸಾದ ವಿತರಣೆ
ಶಬರಿಮಲೆ: ಶಬರಿಮಲೆಯಲ್ಲಿ ಮುಂದಿನ ತೀರ್ಥಾಟನಾ ಋತು ವೇಳೆ ಹರಕೆ ಪ್ರಸಾದವಾದ ಅರವಣ ಪಾಯಸದಲ್ಲಿ ಏಲಕ್ಕಿ ಬೆರೆಸಲು ಮುಜ ರಾಯಿ ಮಂಡಳಿ ತೀರ್ಮಾನಿಸಿದೆ.
ಇದಕ್ಕಾಗಿ 12,000 ಕಿಲೋ ಏಲಕ್ಕಿ ಖರೀದಿಸಲಾಗುವುದು. 2023 ಜನವರಿ 11ರ ತನಕ ಶಬರಿಮಲೆಯಲ್ಲಿ ಏಲಕ್ಕಿ ಸೇರಿಸಿದ ಅರವಣ ಪಾಯಸ ವಿತರಿಸಲಾಗುತ್ತಿತ್ತು. ಆದರೆ 2022-23ನೇ ತೀರ್ಥಾಟನಾ ಋತುವಿನಲ್ಲಿ ವಿತರಿಸಲಾದ ಅರವಣ ಪಾಯಸದಲ್ಲಿ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಕೀಟನಾಶಕ ಬಳಸಲಾಗಿದೆ ಎಂದು ದೂರು ಲಭಿಸಿದ ಹಿನ್ನೆಲೆಯಲ್ಲಿ ಅಂತಹ ಏಲಕ್ಕಿ ಬೆರೆಸಿ ತಯಾರಿಸಿದ ಅರವಣ ಪಾಯಸ ಪ್ರಸಾದದ ವಿತರಣೆ ಯನ್ನು ಕೇರಳ ಹೈಕೋರ್ಟ್ ತಡೆದಿತ್ತು. ಇದರಿಂದಾಗಿ ಅಂತಹ ಏಲಕ್ಕಿ ಬೆರೆಸಿ ತಯಾರಿಸಲಾಗಿದ್ದ 6,65,159 ಟಿನ್ ಅರವಣ ಪಾಯಸವನ್ನು ಮಾರಲು ಸಾಧ್ಯವಾಗದೇ ಇರುವ ಸ್ಥಿತಿ ಎದು ರಾಗಿತ್ತು. ಅದರಿಂದಾಗಿ ಮುಜರಾಯಿ ಮಂಡಳಿಗೆ 6,65,15,900 ರೂ.ಗಳ ನಷ್ಟವುಂಟಾಗಿತ್ತು.
ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ಪ್ರಶ್ನಿಸಿ ಮುಜರಾಯಿ ಮಂಡಳಿ ಬಳಿಕ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಅದನ್ನು ಪರಿಶೀ ಲಿಸಿದ ಸುಪ್ರೀಂಕೋರ್ಟ್ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ರದ್ದುಪಡಿಸಿತ್ತು. ಮಾತ್ರವಲ್ಲದೆ ಅರವಣ ಪಾಯಸ ಸೇವಿಸಲು ಯೋಗ್ಯವಾದು ದಾಗಿದೆಯೆಂದೂ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ನ ಈ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆಯ ಮುಂದಿನ ತೀರ್ಥಾಟನಾ ಋತುವಿನಲ್ಲಿ ಏಲಕ್ಕಿ ಮಿಶ್ರಿತ ಅರವಣ ಪಾಯಸ ತಯಾರಿಸುವ ತೀರ್ಮಾನಕ್ಕೆ ಮುಜರಾಯಿ ಮಂಡಳಿ ಈಗ ಬಂದಿದೆ.
ಶಬರಿಮಲೆ ತೀರ್ಥಾಟನಾ ಋತುವಿನಲ್ಲಿ 2.5 ಟಿನ್ನಷ್ಟು ಅರವಣ ಪಾಯಸ ಪ್ರಸಾದ ಸಾಧಾರಣವಾಗಿ ವಿತರಿಸಲಾಗುತ್ತಿದೆ.