ಹಜ್ ಯಾತ್ರಾರ್ಥಿಗಳಿಗೆ ಯೂತ್ ಕಾಂಗ್ರೆಸ್ ವತಿಯಿಂದ ಬೀಳ್ಕೊಡುಗೆ

ಮಂಜೇಶ್ವರ : ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿರುವ ವರ್ಕಾಡಿ ಗಾಂಧೀನಗರದ ಸೈಯ್ಯದ್ ಶಂಶುದ್ದೀನ್ ತಂಙಳ್, ಸೈಯ್ಯದ್ ಬದ್ರುದ್ದೀನ್ ತಂಙಳ್ ಹಾಗೂ ಶೇಖ್ ಅಬ್ದುಲ್ ಖಾದರ್ ರವರನ್ನು ಇಂಡಿಯನ್ ಯೂತ್ ಕಾಂಗ್ರೆಸ್ ವತಿಯಿಂದ ಬೀಳ್ಕೊಡಲಾಯಿತು. ಗಾಂಧೀನಗರ ತಂಙಳ್ ನಿವಾಸದಲ್ಲಿ ಜರುಗಿದ ಸಮಾರಂಭದಲ್ಲಿ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ, ಸೈಯ್ಯದ್ ಸಿರಾಜುದ್ದೀನ್ ತಂಙಳ್, ಜಿ.ಪಂ.ಮಾಜೀ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಕಾಂಗ್ರೆಸ್ ಮುಖಂಡರಾದ ಎಸ್.ಅಬ್ದುಲ್ ಖಾದರ್ ಹಾಜಿ, ಬಿ.ಕೆ.ಮೊಹಮ್ಮದ್, ಇಕ್ಬಾಲ್ ಮುರತ್ತಣೆ, ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮೊಹಮ್ಮದ್ ಹನೀಫ್, ಯೂತ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಬೂಸಾಲಿ ಮುರತ್ತಣೆ, ಸಹದ್ ಗಾಂಧೀನಗರ ಮುಂತಾದವರು ಉಪಸ್ಥಿತರಿದ್ದರು.

You cannot copy contents of this page