ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಬೇಡಿಕೆ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಚವರ್ಕಾಡ್: ಚವರ್ಕಾಡ್‌ನಲ್ಲಿ ಹೊಸ ಅಂಚೆ ಕಚೇರಿ ಸ್ಥಾಪನೆಗೆ ಸಂಬAಧಿಸಿದAತೆ ಅಂಚೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚವರ್ಕಾಡ್ ಪ್ರದೇಶದ ಜನಸಂಖ್ಯೆ, ಸಾರ್ವಜನಿಕರ ಅಗತ್ಯತೆ, ಸುತ್ತಮುತ್ತಲಿನ ಗ್ರಾಮಗಳಿಗೆ ಲಭ್ಯವಿರುವ ಅಂಚೆ ಸೇವೆಗಳು ಹಾಗೂ ಸೂಕ್ತ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಪ್ರದೇಶದ ಜನರು ಎದುರಿಸುತ್ತಿರುವ ಅಂಚೆ ಸೇವೆಗಳ ತೊಂದರೆಗಳನ್ನು ಸ್ಥಳೀಯ ನಿವಾಸಿಗಳು ಮತ್ತು ಮುಖಂಡರು ವಿವರಿಸಿ, ಶೀಘ್ರವೇ ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಆರಂಭಿಸುವAತೆ ಮನವಿ ಮಾಡಿದರು.
ಚವರ್ಕಾಡ್ ಮತ್ತು ಸುತ್ತಮುತ್ತ ಲಿನ ಗ್ರಾಮಗಳ ಸಾವಿರಾರು ಜನರು ಅಂಚೆ ಸೇವೆಗಾಗಿ ದೂರದ ಪ್ರದೇಶಗಳಿಗೆ ತೆರಳಬೇಕಾಗುತ್ತಿದೆ. ಹೊಸ ಅಂಚೆ ಕಚೇರಿ ಸ್ಥಾಪನೆಯಾ ದರೆ ಹಿರಿಯ ನಾಗರಿಕರು, ವಿದ್ಯಾರ್ಥಿ ಗಳು, ರೈತರು ಹಾಗೂ ಸಾರ್ವಜನಿ ಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಐತಪ್ಪ ಕುಲಾಲ್, ಎಂ.ಎಚ್. ಆರೀಸ್ ಶೇಣಿ, ಕಲಂದರ್ ಅಡ್ಯನಡ್ಕ, ಅಶ್ರಫ್, ಸಿದ್ದೀಕ್ ಚವರ್ಕಾಡ್ ಉಪಸ್ಥಿತರಿದ್ದರು. ಸ್ಥಳ ಪರಿಶೀಲನೆಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಮುಂದಿನ ಹಂತದ ಕ್ರಮಗಳನ್ನು ಇಲಾಖೆ ಕೈಗೊಳ್ಳಲಿದೆ.

RELATED NEWS

You cannot copy contents of this page