ಮಧೂರು ಪಂ. ಕಚೇರಿಗೆ ಐಕ್ಯರಂಗ ಮಾರ್ಚ್

ಮಧೂರು: ಪಂಚಾಯತ್‌ನಲ್ಲಿ ಹಸಿರು ಕ್ರಿಯಾ ಸೇನೆ ಸಂಗ್ರಹಿಸಿದ ತ್ಯಾಜ್ಯವನ್ನು ವಿಂಗಡಿಸಿ ಮಾನದಂಡಗಳನ್ನು ಪಾಲಿಸದೆ ಕನಿಷ್ಠ ಬೆಲೆಗೆ ಖಾಸಗಿ ಕಂಪೆನಿಗೆ ನೀಡಿ ಭ್ರಷ್ಟಾಚಾರ ನಡೆಸಿದ ಬಿಜೆಪಿ ನೇತೃತ್ವದ ಪಂಚಾಯತ್ ಆಡಳಿತ ಸಮಿತಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಐಕ್ಯರಂಗದಿಂದ ಪಂಚಾಯತ್ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಲಾಗಿದೆ. ಉಳಿಯತ್ತಡ್ಕ ಲೀಗ್ ಕಚೇರಿ ಪರಿಸರದಿಂದ ಆರಂಭಿಸಿದ ಮಾರ್ಚ್ ಪಂ. ಕಚೇರಿ ಮುಂಭಾಗ ಪೊಲೀಸರು ತಡೆದರು. ಮಾರ್ಚನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಐಕ್ಯರಂಗದ ಪಂ. ಸಮಿತಿ ಅಧ್ಯಕ್ಷ ಹಾರಿಸ್ ಸೂರ್ಲು ಅಧ್ಯಕ್ಷತೆ ವಹಿಸಿದರು. ಪಿ.ಸಿ. ಸುಮಿತ್ರನ್ ಸ್ವಾಗತಿಸಿದರು.

RELATED NEWS

You cannot copy contents of this page