ತೂಮಿನಾಡು ಜಂಕ್ಷನ್‌ಗೆ ಮಂಜೂರಾದ ಕಾಲು ಸೇತುವೆ ಸ್ಥಳಾಂತರಿಸಲು ಹುನ್ನಾರ: ಸ್ಥಳೀಯರಿಂದ ಆಕ್ರೋಶ
ಮಂಜೇಶ್ವರ: ತೂಮಿನಾಡು ಜಂಕ್ಷನ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಕಾಲು ಸೇತುವೆಯನ್ನು ವ್ಯಕ್ತಿಯೋರ್ವರ ಹಿತಾಸಕ್ತಿಯಿಂದ ಬೇರೆಡೆಗೆ ಸ್ಥಳಾಂತರಿಸಲು ಯತ್ನ ನಡೆಯುತ್ತಿದೆಯೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಮೊದಲು ಶಾಸಕರ ಉಪಸ್ಥಿತಿಯಲ್ಲಿ ತೂಮಿನಾಡು ಜಂಕ್ಷನ್‌ನಲ್ಲಿ ಕಾಲು ಸೇತುವೆ ನಿರ್ಮಿಸಲು ಸ್ಥಳ ಗುರುತಿಸಲಾಗಿತ್ತು. ಇದನ್ನು ಈಗ ಇಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲು ಯತ್ನ ನಡೆಯು ತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಎಲ್ಲರಿಗೂ ಉಪಕಾರಪ್ರದ ವಾಗುವ ಸ್ಥಳದಿಂದ ಕಾಲು ಸೇತುವೆ ಯನ್ನು ಬದಲಿಸುವ ಹುನ್ನಾರವನ್ನು ಸ್ಥಳೀಯರು ವಿರೋಧಿಸಿದ್ದಾರೆ. ಈ ವಿಷಯದಲ್ಲಿ ಶಾಸಕರು ಮಧ್ಯ ಪ್ರವೇಶಿಸಿ ತೂಮಿನಾಡು ಜಂಕ್ಷನ್‌ನಲ್ಲೇ ಕಾಲುಸಂಕ ನಿರ್ಮಿ ಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಭಟಿಸಲು ಸ್ಥಳೀಯರು ಸಿದ್ಧತೆ ನಡೆಸಿದ್ದಾರೆ.