ಮಾನಸಿಕ ಅಸ್ವಸ್ಥತೆಯ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ : ಎರಡು ಪೋಕ್ಸೋ ಪ್ರಕರಣಗಳ ಆರೋಪಿ ವಿರುದ್ಧ ಕೇಸು

ಕಾಸರಗೋಡು: ಮಾನಸಿಕ ಅಸ್ವಸ್ಥತೆ ಎದುರಿಸುತ್ತಿರುವ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ ನೀಡಿದ ಬಗ್ಗೆ ದೂರುಂಟಾಗಿದೆ. ಈ ಸಂಬಂಧ ಎರಡು ಪೋಕ್ಸೋ ಪ್ರಕರಣಗಳಲ್ಲಿ ಆರೋಪಿಯಾದ ಯುವಕನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆಂಗಳ ಪಂಚಾಯತ್ ವ್ಯಾಪ್ತಿಯ ಕ್ವಾರ್ಟರ್ಸ್‌ವೊಂದರಲ್ಲಿ ವಾಸಿಸುವ 20ರ ಹರೆಯದ ಯುವಕನ ರಕ್ಷಕರು ನೀಡಿದ ದೂರಿನಂತೆ ಪೊವ್ವಲ್ ನಿವಾಸಿಯಾದ ಸಾದಿಕ್ (24) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಶಾಲೆಗೆ ತೆರಳಲೆಂದು ಬಸ್‌ಗಾಗಿ ಕಾದು ನಿಂತಿದ್ದ ವಿದ್ಯಾರ್ಥಿಯನ್ನು ಬೈಕ್‌ನಲ್ಲಿ ತಲುಪಿದ ಸಾದಿಕ್ ಕರೆದೊಯ್ದು ಬೀಡಿ ಸೇದಲು ನೀಡಿದ ಬಳಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಮೊದಲ ಕಿರುಕುಳ ಆರು ತಿಂಗಳ ಹಿಂದೆ ನಡೆದಿದೆ. ಅನಂತರ ಹಲವು ದಿನಗಳಲ್ಲಿ ಕಿರುಕುಳ ಮುಂದುವರಿಸಿರುವುದಾಗಿ  ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page