ಪೈವಳಿಕೆ: ಪೈವಳಿಕೆ ಹಾಗೂ ಮೀಂಜ ಪಂಚಾಯತ್ಗಳನ್ನು ಸಂಪರ್ಕಿಸುವ ಪಳ್ಳತ್ತಡ್ಕದಲ್ಲಿರುವ ತೂಗು ಸೇತುವೆ ತುಕ್ಕು ಹಿಡಿದು ಅಪಾಯದಂಚಿನಲ್ಲಿದ್ದು, ಸಂಚಾರಕ್ಕೆ ಭೀತಿ ಸೃಷ್ತಿಯಾಗಿದೆ. ಈ ತೂಗು ಸೇತುವೆಯನ್ನು ನವೀಕರಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ. 2008ರಲ್ಲಿ ಜಿಲ್ಲಾ ಪಂ., ಬ್ಲೋಕ್ ಪಂಚಾಯತ್, ಮೀಂಜ ಪಂಚಾಯತ್, ಸಂಸದ, ಶಾಸಕರ ನಿಧಿಯಿಂದ ಒಟ್ಟು ಸುಮಾರು 16ಲಕ್ಷರೂ ವೆಚ್ಚದಲ್ಲಿ 65 ಮೀಟರ್ ಉದ್ದದ ಉಪ್ಪಳ ಹೊಳೆಯ ಪಳ್ಳತಡ್ಕ ಎಂಬಲ್ಲಿ ಈ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಪೈವಳಿಕೆ ಹಾಗೂ ಮೀಂಜ ಪಂ.ನಲ್ಲಿನ ಮುದ್ದನಡ್ಕ, ದರ್ಭೆ, ಕೊಳಚಪುö್ಪ, ಕೊಮ್ಮಂಗಳ ಪರಿಸರದ ಸುಮಾರು 75 ಕುಟುಂಬ ಗಳು ಶಾಲೆ, ಪಂಚಾಯತ್, ವಿಲೇಜ್ ಆಫೀಸ್, ಸಹಿತ ವಿವಿಧ ಕೆಲಸ ಕಾರ್ಯ ಗಳಿಗೆ ಮೀಯಪದವುಗೆ ಅದೇ ರೀತಿ ಮೀಯಪದವು ಪರಿಸರ ಪ್ರದೇಶಗಳಿಂದ ಕೊಮ್ಮಂಗಳ, ಮುದ್ದನಡ್ಕ ಸಹಿತ ವಿವಿಧ ಕಡೆಗೆ ತೆರಳಲು ಈ ತೂಗು ಸೇತುವೆಯೇ ಆಶ್ರಯವಾಗಿರುವುದಾಗಿ ಊರವರು ತಿಳಿಸಿದ್ದಾರೆ. ತೂಗು ಸೇತುವೆ ನಿರ್ಮಿಸಿದ ಬಳಿಕ ಒಂದು ಬಾರಿ ನವೀಕರಿಸಲಾಗಿರುವುದಾಗಿ ಊರವರು ತಿಳಿಸಿದ್ದಾರೆ. ಆದರೆ ಈಗ ಈ ಸೇತುವೆಯ ಕಬ್ಬಿಣ ಪೂರ್ತಿ ತುಕ್ಕು ಹಿಡಿದಿದ್ದು, ಸಂಚಾರಕ್ಕೆ ಆತಂಕ ಉಂಟಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಇದನ್ನು ಕೂಡಲೇ ನವೀಕರಣಗೊಳಿಸಬೇಕೆಂದು ಊರವರು ಒತ್ತಾಯಿಸಿದ್ದಾರೆ.
