ಮಾರಾಟಕ್ಕಾಗಿ ಸಾಗಿಸುತ್ತಿದ್ದ ಗಾಂಜಾ ಸಹಿತ ಓರ್ವ ಸೆರೆ

ಕುಂಬಳೆ: ಮಾರಾಟಕ್ಕೆಂದು ಸಾಗಿ ಸುತ್ತಿದ್ದ ಗಾಂಜಾ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಉಪ್ಪಳ ಮಣಿಮುಂಡ ಮಸೀದಿ ಬಳಿಯ ಸಯ್ಯಿದ್ ಮುಹ ಮ್ಮದ್ ಅರ್ಶಾದ್ (50) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಕುಂಬಳೆ ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ನೇತೃತ್ವದಲ್ಲಿ ಉಪ್ಪಳದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಮುಹಮ್ಮದ್ ಅರ್ಶಾದ್‌ನನ್ನು ಸೆರೆ ಹಿಡಿಯಲಾಗಿದೆ. ಈತನ ಕೈಯಿಂದ 530 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕೇಸು ದಾಖಲಿಸ ಲಾಗಿದೆ. ಅಸಿ. ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್ ಅನೀಶ್ ಕುಮಾರ್, ಸಿವಿಲ್ ಎಕ್ಸೈಸ್ ಆಫೀಸರ್ ಗಳಾದ ಅಖಿಲೇಶ್, ಇಂದಿರ, ಪ್ರಿವೆಂ?ಟಿವ್ ಆಫೀಸರ್ ಗ್ರೇಡ್ ರಮೇಶನ್, ಪ್ರಿವೆಂಟಿವ್ ಆಫೀಸರ್ ಮನಸ್, ಚಾಲಕ ಪ್ರವೀಣ್ ಎಂಬಿ ವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

RELATED NEWS

You cannot copy contents of this page