ಕಂದಲ್ ಸರೋವರ ಕುಸಿದು ವ್ಯಾಪಕ ನಾಶನಷ್ಟ

ಪುತ್ತಿಗೆ: ಭಾರೀ ಮಳೆಯಿಂದ ಕಂದಲ್  ಸರೋವರ ಬಳಿ ಮಣ್ಣು ಕುಸಿದು ಭಾರೀ ನಾಶನಷ್ಟ ಸಂಭವಿಸಿದೆ. ತೀವ್ರ ಮಳೆಯಿಂದಾಗಿ  ನೀರು ಉಕ್ಕಿ ಹರಿದ ಪರಿಣಾಮ ಶಿರಿಯ ಅಣೆಕಟ್ಟಿನಿಂದ ಅಂಗಡಿಮೊಗರು ವರೆಗೆ ಕೃಷಿ ಅಗತ್ಯಕ್ಕಾಗಿ ನಿರ್ಮಿಸಿದ ಸರೋವರ  ಕುಸಿದಿದೆ.  ಈ ವೇಳೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕೊಚ್ಚಿ ಹೋಗಿ ಸಮೀಪದ ತೋಟದಲ್ಲಿ ತುಂಬಿಕೊಂಡಿದೆ. ಇದರಿಂದ ಹಲವು ಅಡಿಕೆ ಮರಗಳು ನಾಶಗೊಂಡಿವೆ. ಅಲ್ಲದೆ ಕಂದಲ್ ಲ್‌ಪಿ ಶಾಲೆ, ಜುಮಾ ಮಸೀದಿ, ಕೋಡಿ, ಮದಕ್ಕಮೂಲೆ ಎಂಬಿಡೆಗಳಿಗಿರುವ ರಸ್ತೆ ಕೂಡಾ ಹಾನಿಯಾಗಿದೆ.  ಈ ಭಾಗಕ್ಕೆ ಸಾರಿಗೆ ಸೌಕರ್ಯ ಒದಗಿಸಬೇಕು, ಅದೇ ರೀತಿ ಕೃಷಿ ನಾಶವುಂಟಾದುದಕ್ಕೆ ನಷ್ಟ ಪರಿಹಾರ ನೀಡಬೇಕೆಂದು ಮುಸ್ಲಿಂ ಜಮಾಅತ್ ಪದಾಧಿಕಾರಿಗಳಾದ ಸುಲೈಮಾನ್ ಕರಿವೆಳ್ಳಿರು, ಬಷೀರ್ ಪುಳಿಕ್ಕೂರು,  ಕಂದಲ್ ಸೂಫಿ ಮದನಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ

RELATED NEWS

You cannot copy contents of this page