ಪಂಜಿಕಲ್ಲು ಬಳಿ ರಸ್ತೆಯಲ್ಲಿ ಅಪಾಯಕಾರಿ ಹೊಂಡಗಳು:  ವಾಹನ ಸಂಚಾರಕ್ಕೆ ಭೀತಿ

ಅಡೂರು: ಪಂಜಿಕಲ್ಲು ಬಳಿ  ರಸ್ತೆಯಲ್ಲಿ  ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು, ಇದರಿಂದ  ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ. ಪರಪ್ಪೆ-ಪಂಜಿಕಲ್ಲು ಮಧ್ಯೆ ಮುಡೂರು ಎಂಬಲ್ಲಿನ ರಸ್ತೆಯಲ್ಲಿ ಭಾರಿ ಹೊಂಡಗಳು ಸೃಷ್ಟಿಯಾಗಿದೆ. ಈ ಹೊಂಡದಲ್ಲಿ ನಿನ್ನೆ ಸಂಜೆ ಮರ ಸಾಗಾಟದ ಲಾರಿಯೊಂದು ಹೂತುಹೋದ ಘಟನೆ ನಡೆದಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿತ್ತು. ಬಳಿಕ ಲಾರಿಯನ್ನು ತೆರವುಗೊಳಿಸಲಾಗಿದೆ. ಆದರೆ ಸೃಷ್ಟಿಯಾದ ಹೊಂಡಗಳಿಂದ ಅಪಾಯ  ಭೀತಿ ಎದುರಾದ ಹಿನ್ನೆಲೆಯಲ್ಲಿ ಇಂದು ಬಸ್ ಸಹಿತ ಘನ ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಕಾಸರ ಗೋಡಿನಿಂದ ಸುಳ್ಯಕ್ಕೆ ತೆರಳುವ  ಕೆಎಸ್‌ಆರ್‌ಟಿಸಿ ಬಸ್‌ಗಳು  ಕೊಟ್ಯಾಡಿಯಿಂದ ಅಡೂರು, ಮಂ ಡೆಕೋಲು ಮೂಲಕ ಸಂಚರಿಸುತ್ತಿವೆ.  

RELATED NEWS

You cannot copy contents of this page