ಬೀಡಿ ಗುತ್ತಿಗೆದಾರ ನಿಧನ

ಪೈವಳಿಕೆ: ಬಾಯಿಕಟ್ಟೆ ಪಾಂಡ್ಯಡ್ಕ ನಿವಾಸಿ ನಾರಾಯಣ ಬೆಳ್ಚಪ್ಪಾಡ (73) ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.  ಸಿಪಿಐಯ ಕಾರ್ಯದರ್ಶಿಯಾದ ಇವರು ಬೀಡಿ ಗುತ್ತಿಗೆದಾರರಾಗಿದ್ದರು. ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕರಾಗಿದ್ದರು.

ಮೃತರು ಪತ್ನಿ ಗೌರಿ, ಮಕ್ಕಳಾದ ಪ್ರವೀಣ, ಪ್ರವಿತ, ಪ್ರಶಾಂತ್, ಅಳಿಯ ಯಾದವ್, ಸೊಸೆಯಂ ದಿರಾದ ರಶ್ಮಿ, ಸುಮಿತ್ರ, ಸಹೋದರ–ಸಹೋದರಿಯರಾದ ಕಮಲ, ದೇಜಪ್ಪ, ಸುಮತಿ, ಉದಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಐ ಕೌನ್ಸಿಲ್ ಸದಸ್ಯ  ಟಿ. ಕೃಷ್ಣನ್,  ಸಿ.ಪಿ. ಬಾಬು, ವಿ. ರಾಜನ್, ಗೋವಿಂದನ್ ಪಳ್ಳಿಕಾಪಿಲ್,. ಜಯರಾಮ ಬಲ್ಲಂಗುಡೇಲು, ಅಜಿತ್ ಎಂ.ಸಿ ಲಾಲ್ ಬಾಗ್, ಮಂಡಲ ಸದಸ್ಯ ಲೋರೋನ್ಸ್ ಡಿಸೋಜಾ, ಮುಸ್ತಫ ಕಡಂಬಾರು, ಸಿಪಿಐ  ಪೈವಳಿಕೆ ಲೋಕಲ್  ಕಾರ್ಯದರ್ಶಿ  ಕೇಶವ ಬಾಯಿಕಟ್ಟೆ, ಸಹ ಕಾರ್ಯದರ್ಶಿ ಅಶ್ವತ್ ಪೂಜಾರಿ ಲಾಲ್‌ಬಾಗ್, ರವಿ ಮೊಂತೇರೊ, ಪಂಚಾಯತ್ ಸದಸ್ಯೆ ಸುನಿತಾ ವಲ್ಟಿ ಡಿ’ಸೋಜಾ, ಸಿಐಟಿಯು ನೇತಾರ ಚಂದ್ರ ನಾಯ್ಕ್ ಮಾನಿಪ್ಪಾಡಿ,  ಸಿಪಿಎಂ ನೇತಾರ ಅಬ್ದುಲ್ಲ ಕೆ, ಶ್ರೀನಿವಾಸ ಭಂಡಾರಿ, ನಾರಾಯಣ ಶೆಟ್ಟಿ ಕೆ, ಸದಾನಂದ ಕೋರಿಕ್ಕಾರ್, ಬಾಬು ವಾದ್ಯಪಡ್ಪು, ಶಾಂಭವಿ ಬಾಯಿಕಟ್ಟೆ ಮೊದಲಾದವರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.  ಸಿಪಿಎಂ ಬಾಯಿಕಟ್ಟೆ ಬ್ರಾಂಚ್ ಸಮಿತಿ, ಪೈವಳಿಕೆ ಲೋಕಲ್ ಸಮಿತಿ ಸಂತಾಪ ಸೂಚಿಸಿದೆ.

You cannot copy contents of this page