ಜೈಲು ಶಿಕ್ಷೆ ಕಳೆದು ಹೊರ ಬಂದ ಆರೋಪಿ ಮತ್ತೊಂದು ಪ್ರಕರಣದಲ್ಲಿ ಬಂಧನ

ಕಾಸರಗೋಡು: ಜೈಲು ಶಿಕ್ಷೆ ಅನುಭವಿಸಿ ಬಳಿಕ ಬಿಡುಗಡೆಗೊಂಡ ಆರೋಪಿಯನ್ನು ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಚಟ್ಟಂಚಾಲ್ ಪುತ್ತರಿಯಡ್ಕ ವೀಟಿಲ್ ಮುಹಮ್ಮದ್ ರಫೀಕ್ ಅಲಿಯಾಸ್ ಅಪ್ಪಿ ರಫೀಕ್ (32) ಬಂಧಿತನಾದ ಆರೋಪಿ. ಕೆಲವು ದಿನಗಳ ಹಿಂದೆ ಚಟ್ಟಂಚಾಲ್ ಮಹಿನಾ ಬಾದ್ ಸಾಧಿಕ್ ಮಂಜಿಲ್‌ನ ಇಬ್ರಾಹಿಂ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಆರೋಪಿ ಮೊಹಮ್ಮದ್ ರಫೀಕ್ ಚಲಾ ಯಿಸುತ್ತಿದ್ದ  ವಾಹನ ಢಿಕ್ಕಿ ಹೊಡೆದಿತ್ತು.

ಆ ಬಗ್ಗೆ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದರು. ಆ ದೂರು ನೀಡಿದ ದ್ವೇಷದಿಂದ ಆರೋಪಿ ಬಳಿಕ ತನ್ನ ಮೇಲೆ ಹಲ್ಲೆ ನಡೆಸಿ ಇರಿದು ಗಾಯ ಗೊಳಿಸಿದ್ದನೆಂದೂ ಆರೋಪಿಸಿ ಇಬ್ರಾಹಿಂ ನಂತರ ದೂರು ನೀಡಿದ್ದರು. ಅದರಂತೆ ಮೇಲ್ಪರಂಬ ಪೊಲೀಸರು ಮೊಹಮ್ಮದ್ ರಫೀಕ್‌ನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಸೊಂದಕ್ಕೆ ಸಂಬಂಧಿಸಿ ಕರ್ನಾಟಕದ ಜೈಲೊಂದರಲ್ಲಿ ಶಿಕ್ಷೆ ಕಳೆದು ಆರೋಪಿ ಮೊಹಮ್ಮದ್ ರಫೀಕ್ ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು. ಅದರ ಬೆನ್ನಲ್ಲೇ  ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಪೊಲೀಸರು ಆತನನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page