ಬೈಕ್‌ಗೆ ಲಾರಿ ಢಿಕ್ಕಿಹೊಡೆದು ಯುವಕ ಮೃತ್ಯು: ಇನ್ನೋರ್ವನಿಗೆ ಗಂಭೀರ

ಬೇಕಲ:  ಬೇಕಲ ಪಳ್ಳಿಕ್ಕರೆಯಲ್ಲಿ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟಿದ್ದು, ಜತೆಗಿದ್ದ ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ನೀಲೇಶ್ವರ ಚಿರಪ್ಪುರದ ಅಖಿಲ್‌ದೇವ್ (24) ಮೃತಪಟ್ಟ ದುರ್ದೈವಿ. ಇವರ ಸ್ನೇಹಿತ ಪೇರೋಲ್ ಪಳನೆಲ್ಲಿ ಎಂಬಲ್ಲಿನ ಮಿಥುನ್ (24) ಗಾಯಗೊಂಡಿ ದ್ದಾರೆ.  ನಿನ್ನೆ ರಾತ್ರಿ 9 ಗಂಟೆ ವೇಳೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡ ಅಖಿಲ್‌ರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ನಿಧನ ಸಂಭವಿಸಿದೆ. ಮಿಥುನ್‌ರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಸಂಚರಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದ ಬಳಿಕ ನಿಲ್ಲಿಸದೆ ಪರಾರಿಯಾದ ಲಾರಿಯನ್ನು ಕಾಞಂಗಾಡ್‌ನಲ್ಲಿ ನಾಗರಿಕರು ತಡೆದು ನಿಲ್ಲಿಸಿದ್ದಾರೆ.  10 ದಿನಗಳ ಹಿಂದೆಯಷ್ಟೇ ಅಖಿಲ್ ಗಲ್ಫ್‌ನಿಂದ ಊರಿಗೆ ಬಂದಿದ್ದರು.

RELATED NEWS

You cannot copy contents of this page