ಪೆರಿಯಡ್ಕದಲ್ಲಿ ಸಾರಾಯಿ ವಶ: ಓರ್ವ ಸೆರೆ

ಮುಳ್ಳೇರಿಯ: ಓಣಂ ಹಬ್ಬದ ಅಂಗವಾಗಿ ಅಬಕಾರಿ ಇಲಾಖೆ ನಡೆಸುವ ಸ್ಪೆಷಲ್ ಡ್ರೈವ್‌ನ ಅಂಗವಾಗಿ ಬದಿಯಡ್ಕ ಅಬಕಾರಿ ರೇಂಜ್ ಅಸಿಸ್ಟೆಂಟ್ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ದಿನೇಶನ್ ಕೆ. ಹಾಗೂ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಆದೂರು  ಪೆರಿಯಡ್ಕದಿಂದ ಐದು ಲೀಟರ್ ಸಾರಾಯಿ ವಶಪಡಿಸಿ ಸ್ಥಳೀಯ ನಿವಾಸಿ ಪವಿತ್ರನ್ ಕೆ. (60) ಎಂಬಾತನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಕೇಸು ದಾಖಲಿಸಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈತನಿಗೆ ರಿಮಾಂಡ್ ವಿಧಿಸಲಾಗಿದೆ. ಆರೋಪಿ ವಿರುದ್ಧ ಈ ಮೊದಲು ಹಲವಾರು ಅಬಕಾರಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ತಂಡದಲ್ಲಿ ಮಂಜುನಾಥ ಆಳ್ವ, ಮೋಹನ್ ಕುಮಾರ್, ಜನಾರ್ದನ ಎನ್, ವಿನೋದ್ ಕೆ, ಶಾಲಿನಿ ವಿ. ಭಾಗವಹಿಸಿದ್ದರು.

RELATED NEWS

You cannot copy contents of this page