ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ

ಕಾಸರಗೋಡು: ಕೋಟೆಕಣಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವದಂಗವಾಗಿ ಅಶೋಕನಗರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ದಿಂದ ರಾಧಾಕೃಷ್ಣರ ವೇಷ ಧರಿಸಿದ ಮಕ್ಕಳ ಶೋಭಾಯಾತ್ರೆ ಜರಗಿತು. ಧಾರ್ಮಿಕ ಮುಂದಾಳು ಮೀರಾ ಕಾಮತ್ ಉದ್ಘಾಟಿಸಿದರು. ವಿಶ್ವಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣ ಶಿವಕೃಪ ಧಾರ್ಮಿಕ ಭಾಷಣ ಮಾಡಿದರು. ಪ್ರವೀಣ್ ಕುಮಾರ್, ಶ್ರೀಕಾಂತ್ ಕುಮಾರ್, ಮೋದಕ್‌ರಾಜ್ ಸೂರ್ಲು ಮಾತನಾ ಡಿದರು. ಎಸ್‌ಎಸ್‌ಎಲ್‌ಸಿ ವಿಜೇತ ಮಕ್ಕಳನ್ನು ಅಭಿನಂದಿಸಲಾಯಿತು. ಶರಣ್ಯ ಸ್ವಾಗತಿಸಿ, ಭರತೇಶ್ ವಂದಿಸಿದರು.

RELATED NEWS

You cannot copy contents of this page