ತಿರುವನಂತಪುರ ಕಾರ್ಪೊರೇಶನ್‌ನಲ್ಲಿ ಸಿಪಿಎಂ ಆಕ್ರಮಣ: ನಗರದಲ್ಲಿ ಬಿಜೆಪಿ ಪ್ರತಿಭಟನೆ

ಕಾಸರಗೋಡು: ತಿರುವನಂತಪುರ ಕಾರ್ಪೊರೇಶನ್‌ನಲ್ಲಿ ಮೇಯರ್, ಡೆಪ್ಯುಟಿ ಮೇಯರ್ ಸಹಿತದ ಬಿಜೆಪಿ ಕೌನ್ಸಿಲರ್‌ಗಳಿಗೆ ಆಕ್ರಮಣ ನಡೆಸಿದ ಸಿಪಿಎಂನ ವಿರುದ್ಧ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾಸರಗೋಡು ನಗರದಲ್ಲಿ ಪ್ರತಿಭಟನೆ ಮೆರವಣಿಗೆ, ಧರಣಿ ನಡೆಸಲಾಯಿತು. ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಉದ್ಘಾಟಿಸಿದರು.

ಆಡಳಿತ ಕಳೆದುಕೊಂಡ ಸಿಪಿಎಂ ಅಸ್ವಸ್ಥತೆ ಹೊಂದಿದ್ದು, ಮೇಯರ್ ಕಚೇರಿಯ ಚಟುವಟಿಕೆ ಹೆಚ್ಚು ಜನಪರವನ್ನಾಗಿ ಮಾಡಿರುವುದು ಸಿಪಿಎಂಗೆ ಬೆದರಿಕೆ ಉಂಟಾಗಿದೆ ಎಂದು ಇದರಿಂದ ಆಕ್ರಮಣಕ್ಕೆ ಮುಂದಾಗಿರುವು ದಾಗಿ ಅಶ್ವಿನಿ ಅಭಿಪ್ರಾಯಪಟ್ಟರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳಾದ ಮನುಲಾಲ್ ಮೇಲತ್, ಎನ್. ಬಾಬುರಾಜ್, ಪಿ.ಆರ್. ಸುನಿಲ್,ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಶೈಬು, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್  ಸುಕುಮಾರ್ ಕುದ್ರೆಪ್ಪಾಡಿ, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಟಿ.ವಿ. ಮುರಳಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತ ನಾಯ್ಕ್ ಸಹಿತ ಹಲವರು ನೇತೃತ್ವ ನೀಡಿದರು.

RELATED NEWS

You cannot copy contents of this page