‘ನಮ್ಮ ಕಾಸ್ರೋಡು’ ಲಾಂಛನ ಆಹ್ವಾನ
ಕಾಸರಗೋಡು: ಜಿಲ್ಲಾಧಿಕಾರಿ ಕೆ. ಇಂಬಶೇಖರ್ ನೇತೃತ್ವ ನೀಡುವ ಜಿಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಯೊಂದಿಗೆ ಸಂವಾದ ನಡೆಸುವ ‘ನಮ್ಮ ಕಾಸ್ರೋಡು’ ಕಾರ್ಯ ಕ್ರಮಕ್ಕೆ ಸಾರ್ವಜನಿಕರಿಂದ ಲಾಂಛನ ಆಹ್ವಾನಿಸಲಾಗಿದೆ. ಸಂಕ್ಷಿಪ್ತ ಹಾಗೂ ಆಕರ್ಷಕ ವಾಗಿರುವ ಲಾಂಛನವನ್ನು ಈ ತಿಂಗಳ ೫ರ ಮುಂಚಿತ ಜಿಲ್ಲಾ ಇನ್‌ಫರ್ಮೇಶನ್ ಆಫೀಸರ್, ಸಿವಿಲ್ ಸ್ಟೇಷನ್ ವಿದ್ಯಾನಗರ, ಕಾಸರಗೋಡು ಎಂಬ ವಿಳಾಸಕ್ಕೆ ಕಳುಹಿಸಬಹುದು. ಉತ್ತಮವೆಂದು ಆಯ್ಕೆಯಾದ ಲಾಂಛನಕ್ಕೆ ಬಹುಮಾನ ನೀಡಲಾಗುವುದು.