600 ರೂ. ಬೆಲೆಯ ಬಲ್ಬಿಗೆ 4600 ರೂ.: ಕುಂಬಳೆ ಪಂಚಾಯತ್‌ನಲ್ಲಿ  ಬೀದಿ ದೀಪ  ನಿರ್ಮಾಣಕ್ಕೆ ಖರ್ಚು ಮಾಡಿದ್ದು 81,36,000 ರೂಪಾಯಿ;ಅಧಿಕಾರಿಗಳಿಗೆ ದೂರು 

ಕುಂಬಳೆ: ಕುಂಬಳೆ ಪಂಚಾಯತ್‌ನಲ್ಲಿ ಜ್ಯಾರಿಗೊಳಿಸಿದ ಬೀದಿ ದೀಪ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದಾಗಿ ಆರೋಪ ಕೇಳಿಬಂದಿದೆ.

23 ಮಿನಿ ಮಾಸ್ಟ್ ಲೈಟ್‌ಗೆ ಹಾಗೂ 1015 ಬೀದಿದೀಪಗಳಿಗೆ ಪಂಚಾಯತ್ 81,36,000 ರೂಪಾಯಿ ಖರ್ಚು ಮಾಡಿರುವುದರಲ್ಲಿ ಭಾರೀ ವಂಚನೆ  ಹಾಗೂ ಭ್ರಷ್ಟಾಚಾರ ನಡೆದಿರುವುದಾಗಿ  ಪ್ರಮುಖ ಉದ್ಯಮಿ, ಬಿಜೆಪಿ  ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಬಿ. ವಿಕ್ರಂ ಪೈ ಯವರು ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಖರೀದಿಸಿರುವುದಾಗಿ ಹೇಳಲಾಗುವ  ಲೈಟ್‌ಗಳ ಹಾಗೂ ಸ್ಟ್ಯಾಂಡ್‌ಗಳ ಜೊತೆಯಲ್ಲಿ ಕಳೆದ ವರ್ಷ ಖರೀದಿಸಿದವುಗಳೂ ಸೇರಿಕೊಂಡಿವೆಯೆಂದೂ ಅವುಗಳಿಗೆ  ಬಣ್ಣ ಬಳಿದು ಹೊಸತರಂತೆ ಮಾಡಿ ಮರು ಸ್ಥಾಪಿಸಲಾಗಿ ದೆಯೆಂದು ದೂರಿನಲ್ಲಿ ತಿಳಿಸಲಾಗಿದೆ.   

ಅಸಿಸ್ಟೆಂಟ್ ಇಂಜಿನಿಯರ್ ಇಲ್ಲದುದ ರಿಂದ ಪಂ.ನ  ಅಭಿವೃದ್ಧಿಗೆ ಅಡಚಣೆಯುಂ ಟಾಗಿದೆಯೆಂದು  ಆಡಳಿತ ಪಕ್ಷದ  ಸದಸ್ಯರು ಗೊಂದಲ ವ್ಯಕ್ತಪಡಿಸುತ್ತಿ ರುವಾಗಲೇ ಪಂಚಾ ಯತ್‌ನಲ್ಲಿ ಬೀದಿ ದೀಪದ ಹೆಸರಲ್ಲಿ  ಭ್ರಷ್ಟಾ ಚಾರ ನಡೆದಿರುವುದಾಗಿ ಆರೋಪ ಉಂಟಾ ಗಿದೆ.  ಪಂ.ನ 24 ವಾರ್ಡ್‌ಗಳಲ್ಲಿ 23 ಮಿನಿ ಮಾಸ್ಟ್ ಲೈಟ್‌ಗಳು ಹಾಗೂ 1015 ಬೀದಿ ದೀಪಗಳನ್ನು ಸ್ಥಾಪಿಸಲು 81,36,000 ರೂ.ಪಂ. ಖರ್ಚು ಮಾಡಿತ್ತು. ಆದರೆ ಪಂಚಾ ಯತ್‌ನ  ನಾಲ್ಕು ಬಿಜೆಪಿ ವಾರ್ಡ್‌ಗಳಲ್ಲಿ ಹಾಗೂ ಒಂದು ಸಿಪಿಎಂ ವಾರ್ಡ್‌ನಲ್ಲಿ ಒಂದೇ ಒಂದು ಬೀದಿ ದೀಪ ಕೂಡಾ ಸ್ಥಾಪಿಸಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಒಂದು ಬಿಜೆಪಿ ವಾರ್ಡ್‌ನಲ್ಲಿ  10 ಬೀದಿ ದೀಪಗಳನ್ನು ಸ್ಥಾಪಿಸಲಾಗಿದೆ. ಆಡಳಿತ ಪಕ್ಷವಾದ ಮುಸ್ಲಿಂ ಲೀಗ್‌ನ ವಾರ್ಡ್‌ಗಳಲ್ಲಿ 60 ಬೀದಿ ದೀಪಗಳವರೆಗೆ ಸ್ಥಾಪಿಸಲಾಗಿದೆ. ಪರಿಶಿಷ್ಟ ಜಾತಿ, ವರ್ಗ, ಉನ್ನತಿಗಳ ಸಮೀಪ ಕಾನೂನು ರೀತಿಯಲ್ಲಿ ಬೀದಿ ದೀಪ ಸ್ಥಾಪಿಸಬೇಕೆಂಬ ನಿರ್ದೇಶವಿರು ವಾಗಲೇ ಆ ಸ್ಥಳಗಳನ್ನು ಯೋಜ ನೆಯಿಂದ ಹೊರತುಪಡಿಸಲಾಗಿದೆ.   ಪಕ್ಷಪಾತ ತೋರಿಸುವುದಿಲ್ಲ, ಒಂದು ವಿಭಾಗವನ್ನು ಸಂತೋಷಪಡಿ ಸಲು ಪಂ. ಸದಸ್ಯ ಸ್ಥಾನ, ಪಂ. ಆಡಳಿತ ಸಮಿತಿ ಪದಾಧಿಕಾರಿ ಸ್ಥಾನವನ್ನು ದುರುಪಯೋಗಪಡಿ ಸುವುದಿಲ್ಲವೆಂದು ಪ್ರಮಾಣವಚನ ಮಾಡಿ ಅಧಿಕಾರಕ್ಕೇರಿದವರು ಈ ವಿಷಯದಲ್ಲಿ ಪ್ರಮಾಣವಚನವನ್ನು ಉಲ್ಲಂಘಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ 2024, 2025, 2026ನೇ ವರ್ಷಗಳಲ್ಲಿ ಬೀದಿ ದೀಪಗಳ ಮರೆಯಲ್ಲಿ ಕೋಟ್ಯಂತರ ರೂಪಾಯಿಗಳ ವಂಚನೆ ನಡೆದಿರುವುದಾಗಿ ವಿಕ್ರಂ ಪೈ ದೂರಿನಲ್ಲಿ ತಿಳಿಸಿದ್ದಾರೆ.  ಮಿನಿ ಮಾಸ್ಟ್ ಲೈಟ್‌ನ 36 ವಾಟ್ಸ್ ಬಲ್ಬುಗಳನ್ನು ಎಲ್ಲಾ ಕಂಪೆನಿಗಳು ತಯಾರಿಸುತ್ತಿರುವಾಗ ಕುಂಬಳೆ ಪಂಚಾಯತ್ ಖರೀದಿಸಿದ ಮಿನಿ ಮಾಸ್ಟ್ ಬಲ್ಬಿಗೆ ತೋರಿಸಿರು ವುದು 35 ವಾಟ್ಸ್ ಬಲ್ಬುಗಳಾಗಿ ವೆಯೆಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ. ಇಂತಹ ಬಲ್ಬುಗಳಿಗೆ ಉನ್ನತ ಮಟ್ಟದ ಕಂಪೆನಿಗಳು ಸಾರ್ವಜನಿಕ ಮಾರುಕಟ್ಟೆಯಲ್ಲಿ ಗರಿಷ್ಠ 600 ರೂಪಾಯಿ ಪಡೆಯುವಾಗ ಕುಂಬಳೆ ಪಂಚಾಯತ್ ಒಂದು ಬಲ್ಬಿಗೆ 4600 ರೂಪಾಯಿ ನೀಡಿ ಖರೀದಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ಕುಂಬಳೆ ಕೆಎಸ್‌ಟಿಪಿ ರಸ್ತೆ ನಿರ್ಮಾಣವಾದಾಗ ರಸ್ತೆ ಬದಿಯಲ್ಲಿ ಪಂಚಾಯತ್ ಸ್ಥಾಪಿಸಿದ ಮಿನಿ ಮಾಸ್ಟ್ ಲೈಟ್‌ಗಳು ಹಾಗೂ ಬೀದಿ ದೀಪಗಳನ್ನು ತೆರವುಗೊಳಿಸಿ  ಅವುಗಳನ್ನು ಪಂಚಾಯತ್‌ಗೆ ಮರಳಿ ನೀಡಲಾಗಿತ್ತು.  ಈ ಲೈಟ್‌ಗಳಿಗೆ ಬಣ್ಣ ಬಳಿದು ಹೊಸ ಮಿನಿ ಮಾಸ್ಟ್ ಲೈಟ್‌ಗಳೆಂದು ತಿಳಿಸಿ ಹಲವು ಕಡೆಗಳಲ್ಲಿ  ಸ್ಥಾಪಿಸಲಾಗಿz ಯೆಂದೂ ದೂರಿನಲ್ಲಿ ತಿಳಿಸಲಾಗಿದೆ. ಹೊಸ ಯೋಜನೆಯಲ್ಲಿ ಸ್ಥಾಪಿಸಿದ್ದ ಮಿನಿ ಮಾಸ್ಟ್ ಬಲ್ಬುಗಳಲ್ಲಿ ಬಹುಪಾಲು 2024 ಹಾಗೂ 2025ರಲ್ಲಿ  ಬೀದಿ ದೀಪ ಯೋಜನೆಯಲ್ಲಿ ಪಂಚಾ ಯತ್ ಖರೀದಿಸಿದವುಗಳಾಗಿವೆ ಯೆಂದೂ ದೂರಿನಲ್ಲಿ ತಿಳಿಸಲಾಗಿದೆ. ಒಂದು ಬಾರಿ ಖರೀದಿಸುವ ಮಿನಿಮಾಸ್ಟ್, ಬೀದಿ ದೀಪಗಳಿಗೆ ಮೂರು ವರ್ಷಗಳ ವಾರಂಟಿ ಜ್ಯಾರಿಯಲ್ಲಿರುವಾಗಲೇ ಈ ಬೀದಿ ದೀಪಗಳ ದುರಸ್ತಿ ಕೆಲಸಗಳಿಗೆ ಪಂಚಾಯತ್ ಪ್ರತಿ ವರ್ಷ ಭಾರೀ ಮೊತ್ತವನ್ನು ಖರ್ಚುಮಾಡಿರುವು ದಾಗಿಯೂ ದೂರುಗಾರ ಆರೋಪಿಸಿದ್ದಾರೆ. ಬೀದಿ ದೀಪಗಳು ಹಾಗೂ ಹೈಮಾಸ್ಟ್ ಲೈಟ್‌ಗಳನ್ನು ಸ್ಥಾಪಿಸಿದರೆ ಮೂರು ವರ್ಷದೊಳಗೆ ಅದಕ್ಕುಂಟಾಗುವ ಯಾವುದೇ ಹಾನಿಯನ್ನೂ  ವಾರಂಟಿಯ ಪ್ರಕಾರ ವಿತರಣೆಗಾರರು  ದುರಸ್ತಿ ಮಾಡಬೇ ಕೆಂಬ ನಿಬಂಧನೆಯಿರುವಾಗ ಅದರ ದುರಸ್ತಿಗೆ ಭಾರೀ ಮೊತ್ತವನ್ನು ಪಂ. ಖರ್ಚು ಮಾಡುವುದು ಹೇಗೆಂದು  ದೂರಿನಲ್ಲಿ ಪ್ರಶ್ನಿಸಲಾಗಿದೆ. ಇದೇ ವೇಳೆ ಮಾಜಿ ಪಂಚಾಯತ್ ಆಡಳಿತ ಸಮಿತಿ ಯೋಜನೆಗೆ ಕೊಟೇಶನ್ ಕರೆದು ಒಪ್ಪಂದ ಮಾಡಿ ಕೊಂಡಿರುವುದಾಗಿ ಅಧಿಕಾರಿಗಳು ತಿಳಿಸುತ್ತಿದ್ದರೂ ಹೊಸ ಆಡಳಿತ ಸಮಿತಿ  ವಾರ್ಡ್‌ಗಳಲ್ಲಿ, ಬೀದಿ ದೀಪಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಿರುವುದಾಗಿ ತಿಳಿಸಲಾಗಿದೆ.

RELATED NEWS

You cannot copy contents of this page