ಕಾಸರಗೋಡು: ಮೊದಲ ಪತ್ನಿ ದ್ವಿತೀಯ ವಿವಾಹ ನಡೆಸಿದ ವಿರೋಧದಲ್ಲಿ ಮನೆಗೆ ಹಾಗೂ ವಾಹನಕ್ಕೆ ಆಕ್ರಮಿಸಿರುವುದಾಗಿ ನೀಡಿದ ದೂರಿನಂತೆ ಮೊದಲ ಪತಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಪನೆಯಾಲ್ ಕುನ್ನೂಚಿಯ ೩೮ರ ಹರೆಯದ ಯುವತಿ ನೀಡಿದ ದೂರಿನಂತೆ ಕರಿವೆಳ್ಳೂರು ಆಣೂರಿನ ಬೈಜು (40) ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದೆ. ದೂರುದಾರೆಯಾದ ಯುವತಿ ಹಾಗೂ ದ್ವಿತೀಯ ಪತಿ ವಾಸಿಸುವ ಮನೆಯ ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿದ ಬೈಜು ಮನೆಗೆ ಕಲ್ಲೆಸೆದು ಕಿಟಿಕಿ ಗಾಜನ್ನು ಹಾನಿಗೊಳಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. ಮನೆ ಎದುರಲ್ಲಿ ನಿಲ್ಲಿಸಿದ್ದ ಸಹೋದರನ ಪಿಕಪ್‌ಗೂ ಹಾನಿಗೊಳಿಸಿದ್ದು, ಒಟ್ಟು ೫೦೦೦ ರೂ.ಗಳ ನಷ್ಟ ಉಂಟುಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.






