ಲೈಂಗಿಕ ಕಿರುಕುಳ: ನಟ ನಿವಿನ್ ಪೋಲಿ  ಸಹಿತ ಆರು ಮಂದಿ ವಿರುದ್ಧ ಕೇಸು

ಕೊಚ್ಚಿ:  ಮಲೆಯಾಳಂ ಸಿನಿಮಾ ನಟರ ವಿರುದ್ಧ ಲೈಂಗಿಕ ಶೋಷಣೆ ಆರೋಪ ಹೊರಿಸಿ  ನಟಿಯರು  ನೀಡುತ್ತಿರುವ ದೂರುಗಳು ಇನ್ನೂ ಮುಂದುವರಿ ಯುತ್ತಿದೆ. ಇದರಂತೆ ನಟಿಯೋರ್ವೆ  ನೀಡಿದ ದೂರಿನಂತೆ  ನಟ ನಿವಿನ್ ಪೋಲಿ ಸೇರಿದಂತೆ ಆರು ಮಂದಿ ವಿರುದ್ಧ ಕೊಚ್ಚಿ ಊನುಂ ಙಾಲ್ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ನಿವಿನ್ ಪೋಲಿಯನ್ನು ಆರನೇ ಆರೋಪಿ ಯಾಗಿ  ಹೆಸರಿಸಲಾಗಿದೆ.  ಕೋಟ್ಟಯಂ ನಿವಾಸಿ ಶ್ರೇಯಾ, ಸಿನಿಮಾ ನಿರ್ಮಾಪಕ ತೃಶೂರಿನ ಎ.ಕೆ. ಸುನಿಲ್, ಎರ್ನಾಕುಳಂ ನಿವಾಸಿಗಳಾ ದ ಬಿನು, ಬಶೀರ್ ಮತ್ತು ಕುಟ್ಟನ್ ಎಂಬಿವರು ಈ ಪ್ರಕರಣದ ಇತರ ಆರೋಪಿಗಳಾಗಿದ್ದಾರೆ. ನೇರ್ಯ ಮಂಗಲ ನಿವಾಸಿಯಾದ ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಸಿನಿಮಾದಲ್ಲಿ ನಟಿಸಲು ಅವಕಾಶ ನೀಡುವುದಾಗಿ ತಿಳಿಸಿ ಕಳೆದ ನವಂಬರ್ ತಿಂಗಳಲ್ಲಿ ದುಬಾಯ ಹೋಟೆಲೊಂದರಲ್ಲಿ ಆರೋಪಿಗಳು ತನಗೆ  ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಆರೋಪಿಸಿದ್ದಾಳೆ.

ಇದೇ ವೇಳೆ ತನ್ನ ವಿರುದ್ಧ ಮಾಡಲಾದ ಆರೋಪ  ಸುಳ್ಳೆಂದೂ ಅದರ ವಿರುದ್ಧ ತಾನು ಕಾನೂನು ಹೋರಾಟ ನಡೆಸುವುದಾಗಿ ನಿವಿನ್ ಪೋಲಿ ಹೇಳಿದ್ದಾರೆ.

You cannot copy contents of this page