ಮಲಿನ ಜಲ ಚರಂಡಿಗೆ ಹರಿಯಬಿಟ್ಟ ಫ್ಲ್ಯಾಟ್ ಮಾಲಕರಿಂದ ದಂಡ ವಸೂಲಿ

ಉಪ್ಪಳ: ಪೇಟೆಯ ವಿವಿಧ ಅಪಾರ್ಟ್‌ಮೆಂಟ್‌ಗಳಿಂದ ರಸ್ತೆಗೆ, ಸಾರ್ವಜನಿಕ ಚರಂಡಿಗಳಿಗೆ, ಮಲಿನ ಜಲವನ್ನು ಹರಿಯಬಿಟ್ಟು ಪರಿಸರ ಮಲಿನೀಕರಣ ಸೃಷ್ಟಿಸಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಇಲಾಖೆಯ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ದಂಡ ವಿಧಿಸಿದೆ. ತ್ಯಾಜ್ಯ ಗುಂಡಿ ತುಂಬುವಾಗ ಪೈಪ್ ಮೂಲಕ ಸಾರ್ವಜನಿಕ ಚರಂಡಿಗೆ ಹರಿಯಬಿಡಲಾಗುತ್ತಿದೆ. ಕಾನೂನು ಉಲ್ಲಂಘನೆ ವ್ಯಾಪ್ತಿಯನುಸಾರವಾಗಿ ಅಪಾರ್ಟ್‌ಮೆಂಟ್ ಮಾಲಕರಿಗೆ ೨೦,೦೦೦ ರೂ.ನಂತೆ ದಂಡ ಹೇರಲಾಗಿದೆ. ಸೂಪರ್ ಮಾರ್ಕೆಟ್‌ಗೆ ಹೊಂದಿಕೊಂಡಿರುವ ಅಪಾರ್ಟ್ ಮೆಂಟ್ ಮಾಲಕನಿಂದ ೧೦,೦೦೦ ರೂ. ಸ್ಥಳದಲ್ಲೇ ದಂಡ ವಸೂಲು ಮಾಡಲಾಗಿದೆ.

ಮಲಿನ ಜಲವನ್ನು ಸಂಸ್ಕರಿಸುವುದಕ್ಕೆ ಶಾಶ್ವತ ವ್ಯವಸ್ಥೆ ಕೈಗೊಳ್ಳಬೇಕೆಂದು, ಐದು ದಿನದೊಳಗೆ ತ್ಯಾಜ್ಯಗುಂಡಿ ಸ್ಥಾಪಿಸಬೇಕೆಂದು ತಂಡ ಸಂಬಂಧಪಟ್ಟವರಿಗೆ ತಿಳಿಸಿದೆ. ಮಲಿನ ಜಲವನ್ನು ಸಾರ್ವಜನಿಕ ಪ್ರದೇಶಗಳಿಗೆ ಹರಿಯಬಿಡುವುದು ಸಾಂಕ್ರಾಮಿಕ ರೋಗ, ಹಲವು ರೀತಿಯ ಅಸೌಖ್ಯಗಳಿಗೆ ಕಾರಣವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿ ಫ್ಲ್ಯಾಟ್‌ಗಳ ಹಾಗೂ ಇತರ ಸಂಸ್ಥೆಗಳಿಂದ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚುವುದಕ್ಕೆ ಈ ರೀತಿಯ ಪ್ರದೇಶಗಳಲ್ಲಿ ಹೆಚ್ಚಿನ ಸಮಯಗಳಲ್ಲಿ ತಪಾಸಣೆ ನಡೆಸುವುದಾಗಿ ಸ್ಕ್ವಾಡ್ ಲೀಡರ್ ತಿಳಿಸಿದ್ದಾರೆ. ತಪಾಸಣೆಗೆ ಕೆ.ವಿ. ಮೊಹಮ್ಮದ್ ಮದನಿ, ಒ.ಪಿ. ವಿನೇಶ್ ಕುಮಾರ್, ಇ.ಕೆ. ಫಾಸಿಲ್ ನೇತೃತ್ವ ನೀಡಿದರು.

RELATED NEWS

You cannot copy contents of this page