ಯುವತಿ ಕೆರೆಗೆ ಬಿದ್ದು ಮೃತ್ಯು

ಕುಂಬಳೆ: ಯುವತಿಯೋರ್ವೆ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರ್ಮುದೆ ಎಡಕ್ಕಾನದ ಕಾಂತಪ್ಪ ಗೌಡ-ಕಮಲ ದಂಪತಿಯ ಪುತ್ರಿ ಲಕ್ಷ್ಮಿ ಕೆ.(46) ಮೃತಪಟ್ಟ ದುರ್ದೈವಿ. ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದ್ದ ಲಕ್ಷ್ಮಿ ಮರಳಿ ಬಾರದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹಿತ್ತಿಲಿನಲ್ಲಿರುವ ಕೆರೆಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಕೂಡಲೇ  ಸ್ಥಳೀಯರು ಸೇರಿ ಮೇಲಕ್ಕೆತ್ತಿ ಉಪ್ಪಳದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಮೃತರು ತಂದೆ, ತಾಯಿ, ಸಹೋದರ- ಸಹೋದರಿಯರಾದ ಶಿವಪ್ಪ, ಜಯಕುಮಾರ್, ಪರಮೇಶ್ವರ, ಸರಸ್ವತಿ, ಜಾನಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page