ಕುಂಬಳೆ ಉಪಜಿಲ್ಲಾ ಶಾಲಾ ಒಲಿಂಪಿಕ್ಸ್ 7ರಿಂದ ನೀರ್ಚಾಲ್‌ನಲ್ಲಿ

ನೀರ್ಚಾಲು: ಕುಂಬಳೆ ಉಪಜಿಲ್ಲಾ ಮಟ್ಟದ ಕೇರಳ ಶಾಲಾ ಒಲಿಂಪಿಕ್ಸ್ ಈ ಬಾರಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯಲಿದೆ. ಅಕ್ಟೋಬರ್ 7ರಿಂದ 10ರ ತನಕ ವಿವಿಧ ಕ್ರೀಡಾ ಸ್ಪರ್ಧೆಗಳು ಶಾಲೆಯ ನೀರ್ಚಾಲು ಮತ್ತು ಮಲ್ಲಡ್ಕದ ಮೈದಾನದಲ್ಲಿ ನಡೆಯಲಿರುವುದು. 7ರಂದು ಬೆಳಿಗ್ಗೆ ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ  ಧ್ವಜಾರೋಹಣಗೈದು ಚಾಲನೆ ನೀಡುವರು. ೮ರಂದು ಬೆಳಿಗ್ಗೆ ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷ ತೆಯಲ್ಲಿ ನಡೆಯುವ  ಸಮಾರಂಭದಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್  ಕ್ರೀಡಾ ಸ್ಪರ್ಧೆಗಳನ್ನು ಉದ್ಘಾಟಿಸುವರು. ೧೦ರಂದು ಅಪರಾಹ್ನ ಸಮಾರೋಪ ಸಮಾರಂಭ ನಡೆಯಲಿದೆ.

You cannot copy contents of this page