ಸಿಪಿಐ ನೇತಾರ ಬೆಜ್ಜ ಗೋವಿಂದ ಹೆಗ್ಡೆ ಸಂಸ್ಮರಣೆ

ಮಂಜೇಶ್ವರ: ಸಿಪಿಐ ಹಿರಿಯ ನೇತಾರ, ಮಜಿಬೈಲ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ. ಗೋವಿಂದ ಹೆಗ್ಡೆಯವರ ೫ನೇ ಸಂಸ್ಮರಣೆ ಕಾರ್ಯಕ್ರಮ ಬೆಜ್ಜದಲ್ಲಿರುವ ಅವರ ಸ್ಮೃತಿ ಮಂಟಪ ಪರಿಸರದಲ್ಲಿ ನಡೆಯಿತು. ಸಿಪಿಐ  ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಕೃಷ್ಣ ಕಡಂಬಾರು ಉದ್ಘಾಟಿಸಿದರು. ಹಿರಿಯ ಕಾರ್ಯ ಕರ್ತ ಬಿ. ವಾಸು ಧ್ವಜಾರೋಹಣ ನಡೆಸಿದರು.  ಬೆಜ್ಜ ಸಮಿತಿ ಸದಸ್ಯ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದರು.  ಸಿಪಿಐ ಜಿಲ್ಲಾ ಕೌನ್ಸಿಲ್ ಸದಸ್ಯ ರಾಮಚಂದ್ರ ಬಡಾಜೆ, ಮೀಂಜ ಲೋಕಲ್ ಕಾರ್ಯದರ್ಶಿ ಗಂಗಾಧರ ಕೊಡ್ಡೆ, ಎಐವೈಎಫ್ ಮಂಡಲ ಕಾರ್ಯದರ್ಶಿ ಶರತ್ ಬೆಜ್ಜ, ಪಂಚಾಯತ್ ಸದಸ್ಯೆ ರೇಖಾ ಶರತ್, ಕಿಶನ್ ಹೆಗ್ಡೆ ಮೊದಲಾದವರು ಮಾತನಾಡಿದರು. ಪಕ್ಷದ ಬ್ರಾಂಚ್ ಕಾರ್ಯದರ್ಶಿ ಭಾಸ್ಕರ ಸ್ವಾಗತಿಸಿ, ದೇವಿ ಪ್ರಸಾದ್ ಶೆಟ್ಟಿ ವಂದಿಸಿದರು.

You cannot copy contents of this page