ಬಾಲಕನ ಶಸ್ತ್ರಚಿಕಿತ್ಸೆ ವೇಳೆ ನರ ತುಂಡರಿಸಲ್ಪಟ್ಟ ಘಟನೆ : ಕಾಞಂಗಾಡ್ ಜಿಲ್ಲಾಸ್ಪತ್ರೆಯ ವೈದ್ಯನ ವಿರುದ್ಧ ಕೇಸು ದಾಖಲು

ಕಾಸರಗೋಡು: ಕಾಞಂಗಾಡ್ ಜಿಲ್ಲಾಸ್ಪತ್ರೆಯಲ್ಲಿ ಹರ್ನಿಯ ಶಸ್ತ್ರಚಿಕಿತ್ಸೆ ವೇಳೆ ಹತ್ತರ ಹರೆಯದ ಬಾಲಕನ ಕಾಲಿಗೆ ಸಂಪರ್ಕ ಹೊಂದಿರುವ ನರವನ್ನು ತುಂಡರಿಸಲಾಯಿತೆಂಬ ಘಟನೆಗೆ ಸಂಬಂಧಿಸಿ ವೈದ್ಯನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಸೀನಿಯರ್ ಸರ್ಜನ್ ವಿನೋದ್  ಕುಮಾರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಬಾಲಕನ ತಂದೆ ವೆಳ್ಳಿಕೋತ್ ಪೆರಳಂ ತೀಯ ತೊಟ್ಟಿಯ ಅಶೋಕನ್ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ತಿಂಗಳ 19ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. ಬಾಲಕನನ್ನು ಆಪರೇ ಶನ್ ಥಿಯೇಟರ್‌ಗೆ ಪ್ರವೇಶಿಸಿದ ಐದು ನಿಮಿಷಗಳೊಳಗೆ ಹೊರ ಬಂದ ವೈದ್ಯ ತನಗೆ ಚಿಕಿತ್ಸೆ ವೇಳೆ ಲೋಪ ಸಂಭವಿಸಿತೆಂದೂ ಬಾಲಕನನ್ನು ಕೂಡಲೇ ಕಣ್ಣೂರಿನ ಆಸ್ಪತ್ರೆಗೆ ತಲುಪಿಸಬೇಕೆಂದು ತಂದೆಯೊಂದಿಗೆ ತಿಳಿಸಿದ್ದರೆನ್ನ ಲಾಗಿದೆ. ಇದರಂತೆ ಬಾಲಕನನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.  ಬಾಲಕ ಐದು ದಿನಗಳ ನಂತರ ಕಣ್ಣೂರಿನ ಆಸ್ಪತ್ರೆಯಿಂದ ಬಿಡುಗಡೆಗೊಂಡಿ ದ್ದನು. ಆದರೆ ಶಸ್ತ್ರಚಿಕಿತ್ಸೆಯ ಗಾಯ ಒಣಗಿದುದಲ್ಲದೆ ತುಂಡರಿಸಲ್ಪಟ್ಟ ನರವನ್ನು ಹೊಲಿದು ಸೇರಿಸಿರುವುದೋ ಹೊರತು  ಹರ್ನಿಯ ಶಸ್ತ್ರಚಿಕಿತ್ಸೆ ನಡೆಸಲಿಲ್ಲವೆಂದು ಅಶೋಕನ್ ದೂರಿದ್ದಾರೆ.

ಕಣ್ಣೂರಿನ ಆಸ್ಪತ್ರೆಯಲ್ಲಿ ತಗಲಿದ ಖರ್ಚನ್ನು ವೈದ್ಯ ವಿನೋದ್ ಕುಮಾರ್ ವಹಿಸಿದ್ದರು. ಶಸ್ತ್ರಚಿಕಿತ್ಸೆ ಬೇಗ ನಡೆಸಲು ೩೦೦೦ ರೂಪಾಯಿ, ಅನಸ್ತೇಶಿಯಾ  ವೈದ್ಯರಿಗೆ ೧೫೦೦ ರೂಪಾಯಿ ಲಂಚ ನೀಡಿರುವುದಾಗಿಯೂ ಬಾಲಕನ ತಂದೆ ಆರೋಪಿಸಿದ್ದರು.

ಬಾಲಕನ ನರ ತುಂಡರಿಸಲ್ಪಟ್ಟ ಘಟನೆ ವಿವಾದಕ್ಕೆಡೆಯಾದ ಹಿನ್ನೆಲೆಯಲ್ಲಿ ಮಾನವ ಹಕ್ಕು ಆಯೋಗ  ಸ್ವತಃ ಕೇಸುದಾಖಲಿಸಿ ಕೊಂಡಿತ್ತು. ವಿವಿಧ ಯುವಜನ ಸಂಘಟನೆಗಳು ಆಸ್ಪತ್ರೆಗೆ ಮಾರ್ಚ್ ನಡೆಸಿದ್ದವು. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

RELATED NEWS

You cannot copy contents of this page