ಎಂಡಿಎಂಎ ವಶ : ಆರೋಪಿ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ನಳಿನಾಕ್ಷನ್ ನೇತೃತ್ವದ ಪೊಲೀಸರು ನಿನ್ನೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಮಾದಕವಸ್ತುವಾದ 1.72 ಗ್ರಾಂ  ಎಂಡಿಎಂಎ ಸಹಿತ ಓರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ.  ಮೇಲ್ಪರಂಬ ಕಟ್ಟಕ್ಕಾಲ್ ಮೀತಲಡಿ ಹೌಸ್‌ನ  ಮುಹಮ್ಮದ್ ಶಬಾದ್ ಎಂ.ಎ (30) ಬಂಧಿತ ಆರೋಪಿ. ಈತ ಚಲಾಯಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿ ಮೂಲತಃ ಅಡೂರು ಪಳ್ಳಂಗೋಡು ಮೀತಲಡಿ ಹೌಸ್ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page