ಗಾಂಜಾ ಸೇದುತ್ತಿದ್ದ ಮೂವರು ವಿದ್ಯಾರ್ಥಿಗಳ ಸೆರೆ
ಉಪ್ಪಳ: ಐಲ ಗೇಟ್ ಬಳಿಯ ಸಮುದ್ರ ಕಿನಾರೆಯಲ್ಲಿ ಗಾಂಜಾ ಸೇದುತ್ತಿದ್ದ ಮೂರು ಮಂದಿ ವಿದ್ಯಾರ್ಥಿಗಳನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ನಿನ್ನೆ ಸಂಜೆ ೬ ಮಂದಿ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಬೀಚ್ಗೆ ತಲುಪಿ ಗಾಂಜಾ ಸೇದುತ್ತಿದ್ದರು. ಈ ಬಗ್ಗೆ ತಿಳಿದ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ ಪೊಲೀಸರು ಅಲ್ಲ್ಲಿಗೆ ತಲುಪಿದಾಗ ಮೂವರು ಓಡಿ ಪರಾರಿಯಾಗಿದ್ದಾರೆ. ಇತರ ಮೂವರನ್ನು ಸೆರೆಹಿಡಿ ಯಲಾಗಿದೆ. ಸೆರೆಗೀಡಾದವರು ಮಂಗ ಳೂರಿನ ಕಾಲೇಜು ವಿದ್ಯಾರ್ಥಿ ಗಳಾ ಗಿದ್ದಾರೆ. ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.