ಶಬರಿಮಲೆ ತೀರ್ಥಾಟನೆ ಮಧ್ಯೆ ಮೃತಪಟ್ಟ ಕೂಡ್ಲು ನಿವಾಸಿ ಮೃತದೇಹ ಊರಿಗೆ

ಕಾಸರಗೋಡು: ಅಯೋಧ್ಯೆ ಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ತೀರ್ಥಾಟನೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟ ಕೂಡ್ಲು ಪಚ್ಚಕ್ಕಾಡ್‌ನ ಶಿವಪ್ರಸಾದ್ (45)ರ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ನಿನ್ನೆ ರಾತ್ರಿ ಮೃತದೇಹವನ್ನು ಕಾಸರಗೋಡಿಗೆ ತಲುಪಿಸಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ರಿಸಿ ಇಂದು ಬೆಳಿಗ್ಗೆ ಕೂಡ್ಲುವಿನ ಶಿವಕೃಷ್ಣ ಫ್ರೆಂಡ್ಸ್ ಕ್ಲಬ್‌ಗೆ ಕೊಂಡೊಯ್ದು ಸಾರ್ವಜನಿಕ ದಶನಕ್ಕಿರಿಸಲಾಯಿತು. ಬಳಿಕ ಸ್ವ-ಗೃಹಕ್ಕೆ ತಲುಪಿಸಿ ಅಂತಿಮ ವಿಧಿ ವಿಧಾನಗಳ ನಂತರ ಪಾರಕಟ್ಟೆಯ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಕಳೆದ ಸೆಪ್ಟಂಬರ್ 25ರಂದು ಶಿವಪ್ರಸಾದ್ ರೈಲು ಮೂಲಕ ಅಯೋಧ್ಯೆಗೆ ತೆರಳಿದ್ದರು. ಅಲ್ಲಿಂದ ಅಕ್ಟೋಬರ್ ೧ರಂದು ಸ್ನೇಹಿತರಾದ ಕೂಡ್ಲು ನಿವಾಸಿ ಹರೀಶ್‌ರ ಜೊತೆ ಕಾಲ್ನಡೆಯಾಗಿ ಶಬರಿಮಲೆಗೆ ಪ್ರಯಾಣ ಹೊರಟಿದ್ದರು. ದಾರಿ ಮಧ್ಯೆ ಮೊನ್ನೆ ಬೆಳಿಗ್ಗೆ ಮಧ್ಯಪ್ರದೇಶದ ನಿಯೋಣಿ ಜಿಲ್ಲೆಗೆ ತಲುಪಿದಾಗ ಶಿವಪ್ರಸಾದ್‌ರಿಗೆ ಎದೆನೋವು ಉಂಟಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

You cannot copy contents of this page