ಮುಹಮ್ಮದ್ ಸಫ್ವಾನ್ ಕೊಲೆ: ಎಲ್ಲಾ ಆರೋಪಿಗಳನ್ನು ದೋಷಮುಕ್ತಿಗೊಳಿಸಿದ ನ್ಯಾಯಾಲಯ

ತಲಪಾಡಿ: ಬೈಕ್ ತಡೆದು ನಿಲ್ಲಿಸಿ ಯುವಕನನ್ನು ಕೊಲೆಗೈದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನೂ ಮಂಗಳೂರು ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಮಂಗಳೂರು ಹೆಚ್ಚುವರಿ ಸೆಶನ್ಸ್ ನ್ಯಾಯಾಲಯ (6) ಕೋಲಾಹಲ ಸೃಷ್ಟಿಯಾಗಿದ್ದ ಈ ಪ್ರಕರಣದಲ್ಲಿ  ತೀರ್ಪು ನೀಡಿದೆ. ರಾಹುಲ್ ಅಲಿಯಾಸ್ ಬ್ಯಾಕ್ ರಾಹುಲ್, ಪವನ್ ರಾಜ್, ಕರ್ತಿಕ್, ಶಿವರಾಜ್, ಎಡ್ವಿನ್, ರಾಹುಲ್ ಡಿಸೋಜ, ರಾಹುಲ್ ಪೂಜಾರಿ, ಹೇಮಚಂದ್ರ ಎಂಬಿವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.

2016 ಎಪ್ರಿಲ್ 16ರಂದು ಮುಹಮ್ಮದ್ ಸಫ್ವಾನ್ ಎಂಬವರನ್ನು ತೊಕ್ಕೊಟ್ಟು ಮೇಲ್ಸೇಸುವೆ ಸಮೀಪ ಆಕ್ರಮಿಸಲಾಗಿತ್ತು. ಕ್ಯಾಟರಿಂಗ್ ಕೆಲಸ ಮುಗಿಸಿ ಗೆಳೆಯರೊಂದಿಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಮೊಹಮ್ಮದ್ ಸಫ್ವಾನ್ ತೊಕ್ಕೊಟ್ಟು ಮೇಲ್ಸೇತುವೆ ಸಮೀಪ ತಲುಪಿದಾ ಒಂದು ತಂಡ ತಡೆದು ನಿಲ್ಲಿಸಿ ಕಡಿದು ಕೊಲೆಗೈದಿದೆ ಎಂದು ಪ್ರೋಸಿಕ್ಯೂಷನ್ ವಾದಿಸಿತ್ತು. ಉಳ್ಳಾಲದ ರಾಜು ಕೋಟ್ಯಾನ್ ಎಂಬ ವ್ಯಕ್ತಿಯನ್ನು ಕೊಲೆಗೈದ ಪ್ರತಿಕಾರವಾಗಿ ಮುಹಮ್ಮದ್ ಸಫ್ವಾನ್‌ನನ್ನು ಕೊಲೆಗೈದಿದ್ದಾರೆಂದು  ಪೊಲೀಸರು ತನಿಖೆಯಿಂದ ಪತ್ತೆಹಚ್ಚಿದ್ದರು. ಆದರೆ ಆರೋಪಿಗಳ ವಿರುದ್ಧದ ದೋಷಾರೋಪವನ್ನು ದೃಢೀಕರಿಸಲು ಪ್ರೋಸಿಕ್ಯೂಷನ್‌ಗೆ ಸಾಧ್ಯವಾಗಿಲ್ಲವೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

RELATED NEWS

You cannot copy contents of this page