ನುಳ್ಳಿಪ್ಪಾಡಿ ಅಂಡರ್ ಪ್ಯಾಸೇಜ್‌ಗಾಗಿ  ಹೋರಾಟ ನಡೆಸುವವರಿಗೆ ಬೆಂಬಲ ನೀಡಿದ ಕಾಸರಗೋಡಿನ ಕನ್ನಡಿಗರು

ಕಾಸರಗೋಡು: ನುಳ್ಳಿಪ್ಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇ ಕೆಂಬ ಬೇಡಿಕೆ ಮುಂದಿರಿಸಿ ಅಲ್ಲಿನ ನಿವಾಸಿಗಳು ಚಪ್ಪರಹಾಕಿ ನಡೆಸುತ್ತಿ ರುವ ಹೋರಾಟಕ್ಕೆ ಕಾಸರಗೋಡಿನ ಕನ್ನಡಿಗರು ವಾಟ್ಸಪ್ ಗ್ರೂಪ್ ಹಾಗೂ ಕನ್ನಡ ಜಾಗೃತಾ ಸಮಿತಿ ಎಲ್ಲಾ ರೀತಿಯ ಸಹಕಾರ ಹಾಗೂ ಬೆಂಬಲದ ಭರವಸೆ ನೀಡಿದೆ. ವಾಟ್ಸಪ್ ಎಡ್ಮಿನ್ ಡಿ. ಜಯ ನಾರಾಯಣ ತಾಯನ್ನೂರು ಮಾತ ನಾಡಿದರು. ವಾಟ್ಸಪ್ ಗ್ರೂಪ್ ಸದಸ್ಯರು ಹಾಗೂ ಜಾಗೃತಾ ಸಮಿತಿ ಪ್ರತಿನಿಧಿಗಳಾದ ಗುರುಪ್ರಸಾದ್ ಕೋಟೆಕಣಿ, ಪ್ರದೀಪ್ ಬೇಕಲ್, ಯೋಗೀಶ್ ಕೋಟೆಕಣಿ, ದಿವಾಕರ ಅಶೋಕನಗರ, ಭರತ್, ಮೋಹನ್ ರಾವ್, ಕೇಶವ ನುಳ್ಳಿಪ್ಪಾಡಿ ಮೊದ ಲಾದವರು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ನೇರವಾಗಿ ಬೆಂಬಲ ಸೂಚಿಸಿದರು.

You cannot copy contents of this page