ಮುಳಿಯಾರಿನಲ್ಲಿ ಸತತ ಎರಡನೇ ದಿನವೂ ಚಿರತೆ ಕಾಟ
ಕಾಸರಗೋಡು: ಮುಳಿಯಾರ್ ಪಂ. ವ್ಯಾಪ್ತಿಯಲ್ಲಿ ಸತತವಾಗಿ ಎರಡನೇ ದಿನವೂ ಚಿರತೆ ಪ್ರತ್ಯಕ್ಷಗೊಂಡಿದೆ. ಕಾನತ್ತೂರು ಕಾಲಿಪಳ್ಳದಲ್ಲಿ ನಿನ್ನೆ ರಾತ್ರಿ 7.30ಕ್ಕೆ ಚಿರತೆ ಕಂಡು ಬಂದಿದೆ. ಇಲ್ಲಿನ ರಾಜನ್ ಎಂಬವರ ಮನೆ ಅಂಗಳ ದವರೆಗೆ ತಲುಪಿದ ಚಿರತೆಯನ್ನು ಕಂಡು ಮನೆ ಮಂದಿ ಭಯಗೊಂಡು ಬೊಬ್ಬೆಹೊಡೆದಾಗ ಚಿರತೆ ಕಾಡಿಗೆ ಪರಾರಿಯಾಗಿದೆ ಎಂದು ತಿಳಿಸಿ ದ್ದಾರೆ. ನೆರೆಮನೆ ನಿವಾಸಿಯಾದ ನಿವೃತ್ತ ಅಧ್ಯಾಪಕ ಗಂಗಾಧರ, ರಾಜನ್ ಸೇರಿ ಬೆಳಕು ಹಾಯಿಸಿ ದಾಗ ಚಿರತೆ ಕಾಡಿಗೆ ಹಿಂತಿರುಗಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತಲುಪಿ ಹುಡುಕಾಟ ಆರಂಭಿಸಿದ್ದಾರೆ.
ಸತತ ಎರಡು ದಿನ ಗಳಾಗಿ ಮನೆಯಂಗಳದವರೆಗೆ ಚಿರತೆ ತಲುಪಿರುವುದು ಈ ಪರಿಸರದ ಜನರನ್ನು ಭೀತಿಗೊಡ್ಡಿದೆ. ಮಕ್ಕಳು ಶಾಲೆಗೆ, ಅಂಗನವಾಡಿಗೆ ತೆರಳಲು ಭಯ ಪಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಾಲಿಪಳ್ಳದಲ್ಲಿ ಚಿರತೆ ಯನ್ನು ಕಂಡ ಹಿನ್ನೆಲೆಯಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಕ್ಯಾಮರಾಗಳನ್ನು ಸ್ಥಾಪಿಸಲು ವನಪಾಲಕರು ಚಿಂತಿಸುತ್ತಿದ್ದು, ಚಿರತೆಯ ದೃಶ್ಯ ಲಭಿಸಿದರೆ ಗೂಡು ಇರಿಸಬ ಹುದೆಂದಿದ್ದಾರೆ. ನಿನ್ನೆ ಮುಂಜಾನೆ ಪಾಣೂರು ತೋಟದಮೂಲೆಯ ಮಣಿಕಂಠ ಎಂಬವರ ಮನೆಗೆ ತಲುಪಿದ ಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗಿತ್ತು.