ರಾಜ್ಯ ಮಟ್ಟದ ವಿಜ್ಞಾನ ಮೇಳದಲ್ಲಿ ಎಸ್‌ಎಟಿ ಶಾಲೆ ದ್ವಿತೀಯ
ಮಂಜೇಶ್ವರ: ಆಲಪ್ಪುಳದಲ್ಲಿ ಜರಗಿದ ರಾಜ್ಯ ಮಟ್ಟದ ವಿಜ್ಞಾನಮೇಳದಲ್ಲಿ ಪ್ರೌಢಶಾಲಾ ವಿಭಾಗದ ವಿಜ್ಞಾನ ವರ್ಕಿಂಗ್ ಮೋಡಲ್ ಸ್ಪರ್ಧೆಯಲ್ಲಿ ಮಂಜೇಶ್ವರ ಎಸ್. ಎ. ಟಿ. ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಗಗನ್ ರಾಜ್ ಬಿ. ಹಾಗೂ ನಿಶಾಂತ್ ಪ್ರದರ್ಶಿಸಿದ ‘ಫ್ರಿ ಎನರ್ಜಿ ಆಟೋಮ್ಯಾಟಿಕ್ ಇನ್ ವರ್ಟರ್’ ವರ್ಕಿಂಗ್ ಮೋಡಲ್ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದೆ. ಈ ಸಾಧನೆಯೊಂದಿಗೆ ಈ ವಿದ್ಯಾರ್ಥಿಗಳು ಝೋನಲ್ ವಿಭಾಗದ ಸ್ಪರ್ಧೆಗೆ ಅರ್ಹತೆ ಪಡೆದು ಕೊಂಡಿದ್ದಾರೆ. ಶತಮಾನೋತ್ಸವ ಸಂಭ್ರಮದಲ್ಲಿರುವ ಎಸ್.ಎ.ಟಿ ವಿದ್ಯಾಸಂಸ್ಥೆ ಮೊದಲ ಬಾರಿಗೆ ರಾಜ್ಯಮಟ್ಟದಲ್ಲಿ ವಿಜ್ಞಾನ ವಿಭಾಗದ ಪ್ರದರ್ಶನ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆಗೈದಿದ್ದು ಶಾಲೆಗೆ ಮತ್ತು ನಾಡಿಗೆ ಗಗನ್ ರಾಜ್ ಕಣ್ವತೀರ್ಥ ಹಾಗೂ ನಿಶಾಂತ್ ಕುಂಜತ್ತೂರು ಕೀರ್ತಿ ತಂದಿದ್ದಾರೆ. ಒಟ್ಟು 28 ತಂಡಗಳಲ್ಲಿ ಏಕೈಕ ಕನ್ನಡ ಮಾಧ್ಯಮ ವಿದ್ಯಾರ್ಥಿ ಗಳು ಈ ಸಾಧನೆ ಮೆರೆದಿದ್ದಾರೆ.