ನೀರ್ಚಾಲು ಏಣಿಯರ್ಪು ಲೈಫ್ ಹೌಸ್ನ ಮೂಲಭೂತ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಜ್ಯಾರಿಗೊಳಿಸಲು ಸಿಪಿಎಂ ಒತ್ತಾಯ
ನೀರ್ಚಾಲು: ಬದಿಯಡ್ಕ ಪಂಚಾ ಯತ್ನ ನೀರ್ಚಾಲು-ಏಣಿಯರ್ಪು ಲೈಫ್ ಹೌಸ್ನ ಮೂಲಭೂತ ಅಭಿ ವೃದ್ಧಿಗಾಗಿ ಪ್ರತ್ಯೇಕ ಪ್ಯಾಕೇಜ್ ಜ್ಯಾರಿಗೊಳಿಸಬೇಕೆಂದು ಸಿಪಿಎಂ ನೀರ್ಚಾಲು ಲೋಕಲ್ ಸಮಿತಿ ಸಭೆ ಒತ್ತಾಯಿಸಿದೆ. ಈ ಯೋಜನೆಯ ಕರಡು ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲು ಮಾಹಿತಿ ಸಂಗ್ರಹ ಕಾರ್ಯ ನಡೆಸಲಾಯಿತು. ಭೂ ರಹಿತರಿಗೆ ಲಭಿಸಿದ ಮೂರು ಸೆಂಟ್ ಸ್ಥಳದಲ್ಲಿ ಲೈಫ್ ಯೋಜನೆ ಪ್ರಕಾರ ಮನೆ ಲಭಿಸಿದ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಆದರೆ ಮನೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲ ದಿರುವುದರಿಂದ ಕುಟುಂಬಗಳು ಸಂಕಷ್ಟವನ್ನು ಅನುಭವಿಸುತ್ತಿವೆ.
ಆವರಣಗೋಡೆ, ಕುಡಿಯುವ ನೀರು, ಹೈಮಾಸ್ಟ್ ಲೈಟ್, ಅಂಗನ ವಾಡಿ, ಆಟದ ಮೈದಾನ, ಸ್ವ ಉದ್ಯೋಗ ಸಂಸ್ಥೆ ಮೊದಲಾದ ವುಗಳನ್ನು ಜ್ಯಾರಿಗೊಳಿಸುವ ಅಂಗವಾಗಿ ಸಿಪಿಎಂ ನೇತೃತ್ವದಲ್ಲಿ ಮಾಹಿತಿ ಸಂಗ್ರಹ ನಡೆಸಲಾಯಿತು. ಇಲ್ಲಿ ವಾಸಿಸುವ 250 ಕುಟುಂಬ ಗಳಲ್ಲಿ ಹೆಚ್ಚಿನವರು ಮಹಿಳೆಯರಾ ಗಿದ್ದಾರೆ. 40 ಮಕ್ಕಳಿದ್ದಾರೆ. ಬದಿಯಡ್ಕ, ಮಧೂರು, ಚೆಂಗಳ, ಕುಂಬ್ಡಾಜೆ ಪಂಚಾಯತ್ಗಳು, ಕಾಸರಗೋಡು ನಗರಸಭೆ ಮೊದಲಾದೆ ಡೆಗಳಲ್ಲಿದ್ದವರು ಈಗ ಇಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಅಗತ್ಯವುಳ್ಳ ಮೂಲಭೂತ ಸೌಕರ್ಯಗಳ ಕುರಿತಾಗಿ ಯೋಜನೆಯ ಕರಡು ಪ್ಲಾನ್ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲು ಸಭೆ ನಿರ್ಧರಿಸಿದೆ. ಸೀನತ್ ಅಧ್ಯಕ್ಷತೆ ವಹಿಸಿದರು. ನೀರ್ಚಾಲು ಲೋಕಲ್ ಸೆಕ್ರೆಟರಿ ಸುಬೈರ್ ಬಾಪಾಲಿಪೊನ, ಮುಹಮ್ಮದ್ ನಾಸಿರ್, ಲೋಕಲ್ ಸಮಿತಿ ಸದಸ್ಯ. ಟಿ. ಉದಯನ್ ಪಣಿಕ್ಕರ್, ಡಿವೈಎಫ್ಐ ವಲಯ ಅಧಕ್ಷ ಎಂ.ಎಸ್. ಯೋಗೀಶ್ ನೇತೃತ್ವ ನೀಡಿದರು.