ಕುಂಬಳೆಯಲ್ಲಿ ನಿರಂತರ ವಿದ್ಯುತ್ ಮೊಟಕು: ವ್ಯಾಪಾರಿಗಳಿಂದ ಅಧಿಕಾರಿಗಳಿಗೆ ದೂರು
ಕುಂಬಳೆ: ಕುಂಬಳೆ ಪೇಟೆ ಹಾಗೂ ಪರಿಸರ ಪ್ರದೇಶಗಳಲ್ಲಿ ವಿದ್ಯುತ್ ಮೊಟಕುಗೊಳ್ಳುವುದು ನಿತ್ಯ ಘಟನೆಯಾಗಿ ಮಾರ್ಪಟ್ಟಿದೆ. ಇದರಿಂದ ವ್ಯಾಪಾರ ವಲಯಕ್ಕೆ ಭಾರೀ ನಷ್ಟ ಸಂಭವಿಸುತ್ತಿದೆ. ಆದರೆ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ವೆಂದು ವ್ಯಾಪಾರಿಗಳು ಆರೋಪಿಸುತ್ತಿ ದ್ದಾರೆ. ವಿದ್ಯುತ್ ಮೊಟಕುಗೊಂಡ ಬಗ್ಗೆ ತಿಳಿಸಲು ಫೋನ್ ಕರೆ ಮಾಡಿದರೂ ಕಚೇರಿಯ ಅಧಿಕಾರಿಗಳು ನಿರಾಕರಿ ಸುತ್ತಿದ್ದಾರೆ. ಆದ್ದರಿಂದ ವಿದ್ಯುತ್ ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ ನೀತಿಯನ್ನು ಪ್ರತಿಭಟಿಸಿ ಹೋರಾಟಕ್ಕೆ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕುಂಬಳೆ ಘಟಕ ನಿರ್ಧರಿಸಿದೆ.
ಪದೇ ಪದೇ ವಿದ್ಯುತ್ ಮೊಟಕುಗೊಳ್ಳುವ ಸಮಸ್ಯೆಗೆ ಶೀಘ್ರ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿದ್ಯುತ್ ಖಾತೆಯ ಡೆಪ್ಯುಟಿ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್ ಮೊದಲಾದವರಿಗೆ ಮನವಿ ಸಲ್ಲಿಸಲಾಯಿತು. ಸಮಸ್ಯೆಗೆ ಶೀಘ್ರ ಪರಿಹಾರ ಕಾಣಬೇಕೆಂದೂ ಇಲ್ಲದಿದ್ದಲ್ಲಿ ಹರತಾಳ ಸಹಿತ ಚಳವಳಿಗೆ ಮುಂದಾಗಳು ಸಂಘಟನೆ ನಿರ್ಧರಿಸಿದೆ.