ನಾಪತ್ತೆಯಾಗಿದ್ದ ಯುವತಿಯನ್ನು ಕೊಲೆಗೈದು ಹೂತು ಹಾಕಿರುವುದಾಗಿ ಶಂಕೆ: ಓರ್ವ ಕಸ್ಟಡಿಗೆ
ಕೊಲ್ಲಂ: ಕೊಲ್ಲಂ ಕರುನಾಗ ಪಳ್ಳಿಯಿಂದ ನಾಪತ್ತೆಯಾಗಿದ್ದ ಯುವತಿಯನ್ನು ಕೊಲೆಗೈದು ಹೂತುಹಾಕಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದು, ಆತನ ಹೇಳಿಕೆ ಮೇರೆಗೆ ಶೋಧ ಆರಂಭಿಸಲಾಗಿದೆ. ಕರುನಾಗಪಳ್ಳಿ ನಿವಾಸಿ ವಿಜಯಲಕ್ಷ್ಮಿ (48) ಎಂಬಾಕೆ ಕೊಲೆಗೀಡಾದ ಯುವತಿ ಯೆಂದು ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸರು ಕರೂರ್ ನಿವಾಸಿ ಜಯಚಂದ್ರನ್ ಎಂಬಾತ ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮೃತದೇಹವನ್ನು ಅಂಬಲಪುಳ ಕರೂರ್‌ನಲ್ಲಿ ಹೂತುಹಾಕಿರುವುದಾಗಿ ಜಯಚಂದ್ರನ್ ತಿಳಿಸಿದ್ದು, ಇದರಂತೆ ಅಲ್ಲಿ ಕರುನಾಗಪಳ್ಳಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ನವಂಬರ್ ೬ರಿಂದ ವಿಜಯಲಕ್ಷ್ಮಿ ನಾಪತ್ತೆ ಯಾಗಿದ್ದರು. ಈ ಬಗ್ಗೆ ಸಂಬಂಧಿಕ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿಕೊಂ ಡು ತನಿಖೆ ನಡೆಸುತ್ತಿದ್ದಾಗ ಜಯಚಂದ್ರನ್ ಕುರಿತು ಸುಳಿವು ಲಭಿಸಿದೆ. ಜಯಚಂದ್ರನ್ ಹಾಗೂ ವಿಜಯಲಕ್ಷ್ಮಿ ಹತ್ತಿರದ ಸಂಬಂಧ ಹೊಂದಿದ್ದರೆನ್ನಲಾಗಿದೆ. ವಿಜಯಲಕ್ಷ್ಮಿಗೆ ಬೇರೊಬ್ಬನೊಂದಿಗೆ ಸಂಬಂಧವಿದೆಯೆಂಬ ಸಂಶಯದ ಮೇರೆಗೆ ಆಕೆಯನ್ನು ಕೊಲೆಗೈದಿರು ವುದಾಗಿ ಜಯಚಂದ್ರನ್ ಪೊಲೀಸರಲ್ಲಿ ತಿಳಿಸಿದ್ದಾನೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ಮೃತದೇಹವನ್ನು ಹೂತು ಹಾಕಿರು ವುದಾಗಿ ಈತ ಹೇಳಿಕೆ ನೀಡಿದ್ದಾನೆ. ವಿಜಯಲಕ್ಷ್ಮಿ ಯನ್ನು ಕೊಲೆಗೈದ ಬಳಿಕ ಆಕೆಯ ಮೊಬೈಲ್ ಫೋನ್ ನ್ನು ಜಯಚಂದ್ರನ್ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಪೇಕ್ಷಿಸಿದ್ದನು. ಅದು ಎರ್ನಾಕುಳಂನಲ್ಲಿ ಸ್ವಿಚ್ ಆಫ್ ಆದ ಸ್ಥಿತಿಯಲ್ಲಿ ಬಸ್ ಕಂಡಕ್ಟರ್‌ಗೆ ಲಭಿಸಿತ್ತು. ಅದನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು. ಪೊಲೀಸರು ಫೋನ್ ಪರಿಶೀಲಿಸಿದಾಗ ಅದರಿಂದ ಕೊನೆಯದಾಗಿ ಜಯಚಂದ್ರನ್ ಗೆ ಕರೆ ಹೋಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಕಸ್ಟಡಿಗೆ ತೆಗೆದು ವಿಚಾರಣೆಗೊಳಪಡಿಸಿದಾಗ ಕೊಲೆಯ ಸುಳಿವು ಲಭಿಸಿದೆ.