ಪತ್ನಿಗೆ ಹಲ್ಲೆ: ಪತಿ ವಿರುದ್ಧ ನರಹತ್ಯಾ ಯತ್ನ ಕೇಸು ದಾಖಲು

ಕುಂಬಳೆ: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವು ದಾಗಿ ಆರೋಪಿಸಿ ಆಕೆ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪತಿ ವಿರುದ್ಧ ನರಹತ್ಯಾ ಪ್ರಕರಣ ದಾಖಲಿಸಿಕೊಂ ಡಿದ್ದಾರೆ.

ಕುಂಬ್ಡಾಜೆ ಬೆಳಿಂಜ ಕುಂಬಂ ಕಂಡಂ ಹೌಸ್‌ನ ಸಾಜಿದ (24) ಈ ಬಗ್ಗೆ ನೀಡಿದ ದೂರಿನಂತೆ    ಪತಿ ಬಾಡೂರು ನಿವಾಸಿ ಕಲಂದರ್ ಶಾಫಿ ವಿರುದ್ಧ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುಗಾರಳಾದ ಸಾಜಿದಾ ಮತ್ತು ಕಲಂದರ್ ಶಾಫಿ ಮದುವೆ 2019 ದಶಂಬರ್ 13ರಂದು  ಮತಾಚಾರ ಪ್ರಕಾರ ನೆರವೇರಿತ್ತು. ಆ ಬಳಿಕ ಬಾಡೂರು ಪೆರ್ಮುದೆಯಲ್ಲಿರುವ ಪತಿಯ ಮನೆಯಲ್ಲಿ ಪತಿ ಹಾಗೂ ಇತರ ಇಬ್ಬರು ಸೇರಿ ಹೆಚ್ಚುವರಿ ಹಣ ಮತ್ತು ಚಿನ್ನ ನೀಡುವಂತೆ ಆಗ್ರಹಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದರೆಂದು ಪೊಲೀಸರಿಗೆ  ನೀಡಿದ ದೂರಿನಲ್ಲಿ ಸಾಜಿದ ಆರೋಪಿಸಿದ್ದಾರೆ. ಇದಾದ ಬಳಿಕ ನೀರ್ಚಾಲು ಮುಗು ರಸ್ತೆಯ ಬಾಡಿಗೆ ಮನೆಯಲ್ಲಿ ವಾಸಿಸಲಾ ರಂಭಿಸಿದ  ಬಳಿಕ ಪತಿ ಇನ್ನೊಂದು ಸಂಬಂಧ ಹೊಂದಿದ್ದನೆಂದೂ ಅದನ್ನು ಪ್ರಶ್ನಿಸಿದ ದ್ವೇಷದಿಂದ ನ. ೧೬ರಂದು ಪತಿ ಮತ್ತು ಇಬ್ಬರು ಆರೋಪಿಗಳು ಸೇರಿ ತನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಮರುದಿನ ಆರೋಪಿ ಗಳು ತನ್ನ ಮೇಲೆ ಮತ್ತೆ ಹಲ್ಲೆ ನಡೆಸಿ ಆಗ  ಪತಿ ತನ್ನ ಕುತ್ತಿಗೆಯನ್ನು ಶಾಲಿನಿಂದ ಬಿಗಿದನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ  ಸಾಜಿದಾ  ಆರೋಪಿಸಿದ್ದಾಳೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page