ಕಳವು ಆರೋಪಿಯನ್ನು ಎಡನೀರು ಕ್ಷೇತ್ರಕ್ಕೆ ತಲುಪಿಸಿ ಮಾಹಿತಿ ಸಂಗ್ರಹ
ಎಡನೀರು: ನವಂಬರ್ ೩ರಂದು ರಾತ್ರಿ ಎಡನೀರು ಮಠದ ಶ್ರೀ ವಿಷ್ಣು ಮಂಗಲ ಕ್ಷೇತ್ರಕ್ಕೆ ನುಗ್ಗಿ ಕಾಣಿಕೆಹುಂಡಿ ಒಡೆದು ಅದರಲ್ಲಿದ್ದ 7500 ರೂ.ವನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಬಳಿಕ ನ್ಯಾಯಾಂಗ ಬಂ ಧನಕ್ಕೊಳ ಗಾದ ಆರೋಪಿ ಮೂಲತಃ ಕರ್ನಾಟಕ ಕಡಬ ತಾಲೂಕಿನ ಪೊಯ್ಯೆ ಅತೂರು ಕುಳಾಯಿ ಹೌಸ್‌ನ ನಿವಾಸಿ ಹಾಗೂ ಈಗ ಬಂಬ್ರಾಣದ ಪತ್ನಿ ಮನೆಯಲ್ಲಿ ವಾಸಿಸುತ್ತಿರುವ ಇಬ್ರಾಹಿಂ ಕಲಂದರ್ ಅಲಿಯಾಸ್ ಇಬ್ರಾಹಿಂ (45)ನನ್ನು ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ವಿ. ರಾಮಕೃಷ್ಣನ್ ನೇತೃತ್ವದ ಪೊಲೀಸರು ನಿನ್ನೆ ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರಕ್ಕೆ ಕರೆದೊಯ್ದು ಅಲ್ಲಿಂದ ಅಗತ್ಯದ ಮಾಹಿತಿ ಸಂಗ್ರಹಿಸಿದ್ದಾರೆ.
ಕಳವು ನಡೆದ ದಿನ ಎಡನೀರು ಶ್ರೀ ವಿಷ್ಣುಮಂಗಲ ಕ್ಷೇತ್ರದ ಪಂಚ ಲೋಹದ ವಿಗ್ರಹದ ಬಲಿಬಿಂಬವನ್ನು ಅದರ ಯಥಾ ಸ್ಥಾನದಿಂದ ಬದಲಾಯಿಸಿದ ಸ್ಥಿತಿಯಲ್ಲಿ ಪತ್ತೆಯಾ ಗಿತ್ತಲ್ಲದೆ ಗಣಪತಿ ದೇವರ ಗರ್ಭಗು ಡಿಯ ಬಾಗಿಲನ್ನೂ ಒಡೆಯಲಾಗಿತ್ತು. ದೇವಸ್ಥಾನದ ಸ್ಟೀಲ್ ಕಪಾಟಿನೊ ಳಗಿದ್ದ ಸಾಮಗ್ರಿಗಳನ್ನೆಲ್ಲವನ್ನು ಎಳೆದು ಚೆಲ್ಲಾಪಿಲ್ಲಿಗೊಳಿಸಿದ ಸ್ಥಿತಿಯಲ್ಲಿತ್ತು. ಆ ಬಗ್ಗೆ ಎಡನೀರು ಮಠದ ಅಸಿಸ್ಟೆಂಟ್ ಮೆನೇಜರ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂಧಿತ ಆರೋಪಿ ಇಬ್ರಾಹಿಂ ಕಲಂದರ್ ಇತರ ಹಲವು ಕಳವು ಪ್ರಕರಣಗಳಲ್ಲೂ ಆರೋಪಿಯಾಗಿದ್ದಾನೆ.