ಮನೆ ನಿರ್ಮಾಣಕ್ಕೆ ಅಡಚಣೆಯಾದ ವಿದ್ಯುತ್ ತಂತಿ: ಬಡ ಮಹಿಳೆ ಸಂಕಷ್ಟದಲ್ಲಿ

ಕುಂಬಳೆ: ಕುಂಬಳೆ ಬದ್ರಿಯಾ ನಗರದ ಖದೀಜುಮ್ಮ ಎಂಬವರಿಗೆ ಸ್ವಂತವಾಗಿ ಮನೆಯೊಂದು ನಿರ್ಮಾಣವಾಗಬೇಕಾಗಿದ್ದು, ಆದರೆ ಮನೆ ಸಮೀಪದಲ್ಲಾಗಿ ಹಾದು ಹೋಗಿರುವ ವಿದ್ಯುತ್ ತಂತಿ ಅಡಚಣೆಯಾಗಿ ಪರಿಣಮಿಸಿದೆ. 20-19-20ರಲ್ಲಿ ಲೈಫ್ ಮಿಷನ್ ವಸತಿ ಯೋಜನೆ ಪ್ರಕಾರ ಖದೀಜುಮ್ಮರಿಗೆ ಮನೆ ಮಂಜೂ ರಾಗಿತ್ತು. ನಾಯ್ಕಾಪು ಶಿವಾಜಿನಗರದಲ್ಲಿ  ಸರಕಾರದಿಂದ ಲಭಿಸಿದ ಸ್ಥಳದಲ್ಲಿ ಮನೆ ನಿರ್ಮಾಣ  ಕೆಲಸ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಅರ್ಧದಷ್ಟಾದ ವೇಳೆ ಆ ಭಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವುದು ಅರಿವಿಗೆ ಬಂದಿದೆ.  ಪಂಚಾಯತ್‌ನಿಂದ ಎರಡು ಕಂತುಗಳಾಗಿ ಲಭಿಸಿದ  1,25,000 ರೂಪಾಯಿ ಮೊತ್ತದಲ್ಲಿ ಗೋಡೆ ನಿರ್ಮಿಸಲಾಗಿದೆ. ಅನಂತರ ಮನೆಯ ಮೇಲ್ಭಾಗದಲ್ಲಾಗಿ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಮುಂ ದಿನ ಕಾಮಗಾರಿ ಮೊಟಕುಗೊಂಡಿದೆ. ಈ ಹಿನ್ನೆಲೆಯಲ್ಲಿ ಎರಡು ವರ್ಷ ಗಳಿಂದ ಖದೀಜುಮ್ಮ ಕೆಎಸ್‌ಇಬಿ, ಪಂಚಾಯತ್ ಕಚೇರಿಗಳಿಗೆ ತೆರಳಿ ವಿದ್ಯುತ್ ತಂತಿಯನ್ನು ಮನೆಯ ಮೇಲ್ಭಾಗದಿಂದ ಬದಲಾಯಿಸಿ ಬೇರೆ ಕಡೆಗಳಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಮನೆ ನಿರ್ಮಾ ಣಕ್ಕಿರುವ ಬಾಕಿ ಮೊತ್ತ ಲಭಿಸಬೇ ಕಾದರೆ ಕಾಮಗಾರಿ ಪೂರ್ಣಗೊಳ್ಳ ಬೇಕಾಗಿದೆ. ಅದಕ್ಕಾಗಿ ವಿದ್ಯುತ್ ತಂತಿಯನ್ನು ಬದಲಾಯಿಸಲೇ ಬೇಕಾಗಿದೆ. ಮನೆ ನಿರ್ಮಾಣ ಅರ್ಧದಲ್ಲೇ ಮೊಟಕುಗೊಂಡಿರುವ ಹಿನ್ನೆಲೆಯಲ್ಲಿ ಖದೀಜುಮ್ಮರಿಗೆ ವಾಸಿಸಲು ಮನೆ ಇಲ್ಲದಂತಾಗಿದೆ. ಆದ್ದರಿಂದ ಮುಂದಿನ ದಾರಿ ಏನೆಂದು ತಿಳಿಯದೆ ಖದೀಜುಮ್ಮ ಸಮಸ್ಯೆಗೀಡಾಗಿದ್ದಾರೆ. ಕೂಲಿ ಕೆಲಸ ನಿರ್ವಹಿಸಿ ಕುಟುಂಬವನ್ನು ಸಲಹುವ ಖದೀಜುಮ್ಮ ಈಗ ಬದ್ರಿಯಾ ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page