ಮೂಲಭೂತ ಸೌಕರ್ಯವಿಲ್ಲದೆ ಶೋಚನೀಯ ಸ್ಥಿತಿಗೆ ತಲುಪಿದ ಕುಂಬಳೆ ಸ್ಮಶಾನ: ನೀರು, ವಿದ್ಯುತ್ ಸೌಕರ್ಯಗಳಿಲ್ಲ; ಜರಿದುಬಿದ್ದ ಆವರಣಗೋಡೆ

ಕುಂಬಳೆ: ಮನುಷ್ಯನ ಹಲವು ಅಗತ್ಯಗಳಲ್ಲಿ ಸ್ಮಶಾನವೂ ಒಂದು. ವ್ಯಕ್ತಿ ಮೃತಪಟ್ಟ ನಂತರ ಮೃತದೇಹವನ್ನು ಸಂಸ್ಕರಿಸಲು  ಸ್ವಂತ ಸ್ಥಳಾವಕಾಶವಿ ಲ್ಲದಿದ್ದವರಿಗೆ ಸ್ಮಶಾನಗಳೇ ಆಶ್ರಯವಾಗಿದೆ. ಆದರೆ ಸ್ಮಶಾನಗಳಿಗಾಗಿ ಸರಕಾರ ಸ್ಥಳ ಮೀಸಲಿರಿಸಿದರೂ ಅಲ್ಲಿ ಅಗತ್ಯವುಳ್ಳ ಸೌಕರ್ಯಗಳನ್ನು ಏರ್ಪಡಿಸಲು ಯಾವುದೇ ಕ್ರಮ ಉಂಟಾಗದಿ ರುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಕುಂಬಳೆ  ಗ್ರಾಮ ಪಂಚಾಯತ್‌ನ ೨೩ನೇ ವಾರ್ಡ್ ಕುಂಬಳೆ ನಗರಕ್ಕೆ ಸಮೀಪವಿರುವ ಕುಂಬಳೆ ಸ್ಮಶಾನದಲ್ಲಿ ಯಾವುದೇ ರೀತಿಯ ಮೂಲ ಸೌಕ ರ್ಯಗಳಿಲ್ಲದೆ ಶೋಚನೀಯವಾಗಿದೆ. ಸ್ಮಶಾನಕ್ಕೆ ತಲುಪುವ ದಾರಿ ಸಂಪೂ ರ್ಣವಾಗಿ ಕಾಡು ತುಂಬಿಕೊಂಡಿದ್ದು, ಶವಾಗಾರದ ಇರುವಿಕೆಯನ್ನು  ಮರೆಮಾಚುತ್ತಿದೆ. ಸ್ಮಶಾನದ ಎದುರು ಭಾಗದಲ್ಲಿ ಖಾಸಗಿ ಕಾಲೇಜು ಹಾಗೂ ಪಂಚಾಯತ್ ಅಧೀನತೆಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಕೇಂದ್ರವಿದೆ. ಸುಮಾರು ನೂರು ವರ್ಷಗಳ ಹಿಂದೆಯೇ ಸಾರ್ವಜನಿಕರು ಶವ ದಹನಕ್ಕಾಗಿ ಉಪಯೋಗಿಸುತ್ತಿದ್ದ ಸ್ಥಳ ಇದ್ದಾಗಿದ್ದರೂ ಪ್ರಸ್ತುತ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲಿಲ್ಲ.

೨೦೧೩ರಲ್ಲಿ ಊರವರು ನೀಡಿದ ಧನ ಸಹಾಯದಿಂದ ಶವಾಗಾರವನ್ನು ಪುನರ್ ನಿರ್ಮಾಣ ಮಾಡಲಾಗಿತ್ತಾರೂ ಸದ್ಯ ಆರಣಗೋಡೆ ಜರಿದು ಬಿದ್ದಿದ್ದು, ಪರಿಸರ ಕಾಡುಪೊದೆಗಳಿಂದ ಕೂಡಿದೆ. ಮಾತ್ರವಲ್ಲ ಕಸದ ತೊಟ್ಟಿಯಾಗಿ ಮಾರ್ಪಟ್ಟ ಸ್ಥಿತಿಯಲ್ಲಿದೆ. ಸ್ಮಶಾನದ ಗೇಟ್‌ನಲ್ಲಿ ಸಾರ್ವಜನಿಕ ರುದ್ರಭೂಮಿ ಎಂದು ನಮೂದಿಸಿದ್ದರೂ ಸ್ಮಶಾನಕ್ಕೆ ಹೋಗಿ ಸೇರುವ ದಾರಿಯಲ್ಲಿ ಯಾವುದೇ ಸೂಚನಾ ಫಲಕ ಇಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ಶವಾಗಾರ ಕ್ಕೆ ತಲುಪುವುದು ಕಷ್ಟಕರವಾಗಿದೆ.

ಹಲವು ಬಾರಿ ಊರವರು ಸಭೆ ಸೇರಿ  ಸ್ಮಶಾನದ ದುರಸ್ತಿಗೆ  ಮನವಿ ಮಾಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಕುಂಬಳೆ, ಕೋಟೆಕಾರ್, ಕಂಚಿಕಟ್ಟೆ, ಪೊಸ್ತಡ್ಕ ಸೇರಿದಂತೆ ಕುಂಬಳೆ ಪೇಟೆ ಪರಿಸರದಲ್ಲಿರುವ ಸ್ಥಳೀಯರಿಗೆ ಕುಂಬಳೆ ಸ್ಮಶಾನವೇ ಆಧಾರ. ಮೂಲ ಸೌಕರ್ಯದ ಕೊರತೆ ಇರುವುದರಿಂದ ಸಾರ್ವಜನಿಕರು ನಗರದ ಒಳವಲಯದಲ್ಲಿರುವ ಕುಂಟಂ ಗೇರಡ್ಕ ಸಾರ್ವಜನಿಕ ಸ್ಮಶಾನವನ್ನು ಆಶ್ರಯಿಸುತ್ತಾರೆ. ಕಿರಿದಾದ ರಸ್ತೆ ಮತ್ತು ಸ್ಮಶಾದನ ಒಳಭಾಗದ ತನಕ ವಾಹನ ಕೊಂಡುಹೋಗಲು ಅಸಾಧ್ಯವಾಗಿರುವುದು ಇಲ್ಲಿನ ಮತ್ತೊಂದು ಸಮಸ್ಯೆ. ನಿರ್ವಹಣೆಯ ಕೊರತೆಯಿಂದಾಗಿ ಅಭಿವೃದ್ಧಿ ಹೊಂದದೇ ಇರುವ ಕುಂಬಳೆ ಸ್ಮಶಾನವು ಶಿಥಿಲಾವಸ್ಥೆಯಲ್ಲಿ ಇದೆ. ಸಂಬಂಧಪಟ್ಟ   ಅಧಿಕಾರಿಗಳು ನವೀಕರಣಗೊಳಿಸಿ  ಉಪಯೋಗಿಸಲು ಯೋಗ್ಯವಾಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿದ್ಯುತ್ ಸಂಪರ್ಕ ಇಲ್ಲದಿ ರುವುದರಿಂದ ಆಧುನಿಕ ವ್ಯವಸ್ಥೆಗಳು ಈ ಚಿತಾಗಾರದಲ್ಲಿ ಲಭ್ಯವಿಲ್ಲ. ನೀರಿನ ವ್ಯವಸ್ಥೆಯೂ ಇಲ್ಲದೇ  ಇರುವುದರಿಂದ ಶವ ದಹನವಾದ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳಲಾಗುತ್ತಿಲ್ಲ.  ಪಂಚಾಯತ್ ಅಧೀನತೆಯಲ್ಲಿರುವ  ಕುಂಬಳೆ ಚಿತಾಗಾರದ ನವೀಕರಣಕ್ಕಾಗಿ ಯೋಜನೆಯಲ್ಲಿ ಸೇರಿಸಿ ಹಣ ಮಂಜೂರುಗೊಂಡರೂ ಗುತ್ತಿಗೆ ಪಡೆದುಕೊಂಡು ಕೆಲಸ ನಡೆಸಲು ಯಾರೂ ಮುಂದೆ ಬಾರದೇ ಇರುವುದರಿಂದ ಕಾಮಗಾರಿ ನಡೆಯುತ್ತಿಲ್ಲವೆಂದು ಪಂಚಾಯತ್ ಅಧಿಕೃತರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page