ಕಾರಿನಲ್ಲಿ ಮಾರಕಾಯುಧಗಳ ಸಹಿತ ಸಂಚರಿಸುತ್ತಿದ್ದ ಯುವಕನ ಬಂಧನ
ಕುಂಬಳೆ: ಕಾರಿನಲ್ಲಿ ಮಾರಕಾ ಯುಧಗಳನ್ನು ಬಚ್ಚಿಟ್ಟು ಸಂಚರಿ ಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಮ್ಟಾಡಿ ಲೋರೆಟ್ಟೊ ಗುತ್ತಾರ್ ಎಂಬಲ್ಲಿನ ಅಡ್ಲಿ ಜೋಕಿಂ ಕ್ಯಾಸ್ತೆಲಿನೋ 23) ಎಂಬಾತ ಬಂಧಿತ ಆರೋಪಿಯಾಗಿ ದ್ದಾನೆ. ಕುಂಬಳೆ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆ ವೇಳೆ ಈತ ಮಾರಕಾಯುಧ ಸಹಿತ ಸೆರೆಗೀಡಾಗಿದ್ದಾನೆ.
ಮುಂಜಾನೆ ೫ ಗಂಟೆಗೆ ಬಂದ್ಯೋಡ್- ಪೆರ್ಮುದೆ ರಸ್ತೆಯ ಗೋಳಿನಡ್ಕ ಎಂಬಲ್ಲಿನ ಹೊಟೇಲ್ ಸಮೀಪ ಬಿಳಿ ಬಣ್ಣದ ರಿಟ್ಸ್ ಕಾರು ನಿಲ್ಲಿಸಲಾಗಿತ್ತು. ಆ ಕಾರಿನ ಮೇಲೆ ಸಂಶಯಗೊಂಡು ಅದರ ಸಮೀಪಕ್ಕೆ ಹೋದಾಗ ಚಾಲಕ ಕಾರನ್ನು ಚಲಾಯಿಸತೊಡಗಿ ದನು. ಈ ವೇಳೆ ಅದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಕಾರಿನೊಳಗೆ ಮುಖವಾಡ, ಗ್ಲೌಸ್, ಚಾಕುಗಳು, ಬಾಳು ಸಹಿತ ಮಾರಕಾಯುಧಗಳು ಪತ್ತೆಯಾಗಿವೆ. ಒಂದು ಚಾಕನ್ನು ಚಾಲಕನ ಸೀಟಿನ ಕೆಳಗೆ ಮ್ಯಾಟ್‌ನಡಿಯಲ್ಲಿ ಬಚ್ಚಿಡಲಾಗಿತ್ತು. ಉಳಿದ ಮಾರಕಾಯುಧಗಳನ್ನು ಢಿಕ್ಕಿಯಲ್ಲಿ ಇರಿಸಿರುವುದು ಪತ್ತೆಯಾಗಿದೆ.
ಈತ ಯಾವ ಉದ್ದೇಶದಿಂದ ಮಾರಕಾಯುಧ ಗಳೊಂದಿಗೆ ಇಲ್ಲಿಗೆ ತಲುಪಿದ್ದಾನೆಂದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದಲ್ಲಿ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್‌ರೊಂದಿಗೆ ಎಸ್‌ಐ ರಾಜೀವನ್, ಸಿವಿಲ್ ಪೊಲೀಸ್ ಆಫೀಸರ್ ಬಾಬು ಮೊದಲಾ ದವರಿದ್ದರು.