ಕೇರಳವನ್ನು ಆರ್ಥಿಕವಾಗಿ ಉಸಿರುಗಟ್ಟಿಸುವ ಯತ್ನ ಕೇಂದ್ರ ನಡೆಸುತ್ತಿದೆ -ಮುಖ್ಯಮಂತ್ರಿ

ಕಾಸರಗೋಡು: ಕೇರಳವನ್ನು ಆರ್ಥಿಕವಾಗಿ ಉಸಿರುಗಟ್ಟಿಸುವ ಯತ್ನ ಕೇಂದ್ರ ಸರಕಾರ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ. ಕೇಂದ್ರ ಕೇರಳದೊಂದಿಗೆ ಹಗೆತನ ರೀತಿಯಲ್ಲಿ ವರ್ತಿಸುತ್ತಿದೆ. ಅಂತಹ ನಿಲುವಿನಿಂದಾಗಿ ವಯನಾಡು ದುರಂತಕ್ಕೆ ಅರ್ಹ ಸಹಾಯವನ್ನು ನೀಡುವ ವಿಷಯದಲ್ಲಿ ಕೇಂದ್ರ ನಿಷೇಧಾತ್ಮಕ ನಿಲುವು ತೋರುತ್ತಿದೆ. ಇಂತಹ ನೀತಿಯನ್ನು ಪ್ರಶ್ನಿಸುವ ವಿಷಯದಲ್ಲಿ ಕೇರಳದ ಎಲ್ಲಾ ಸಂಸದರೂ ಒಂದಾಗಿದ್ದಾರೆ. ಇಂತಹ ಒಗ್ಗಟ್ಟು ಅತ್ಯಂತ ಪ್ರಶಂಸನೀಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ನಿನ್ನೆ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿಯವರು ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿದ್ಯಾನಗರ ಉದಯಗಿರಿಯಲ್ಲಿ ಹೊಸದಾಗಿ ನಿರ್ಮಿಸಲಾದ ಲೈಬ್ರೆರಿ ಕೌನ್ಸಿಲ್ ತರಬೇತಿ ಕೇಂದ್ರವನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎ.ಕೆ.ಎಂ. ಅಶ್ರಫ್, ಸಿ.ಎಚ್. ಕುಂಞಂಬು, ಎಂ. ರಾಜಗೋಪಾಲ್, ಎಕೆಎಂ ಅಶ್ರಫ್, ಲೈಬ್ರೆರಿ ಕೌನ್ಸಿಲ್ ಜಿಲ್ಲಾ ಅಧ್ಯಕ್ಷ ಕೆ.ವಿ. ಕುಂಞಿರಾಮನ್, ಪಿ.ವಿ. ಪನಯಲ್, ಎ.ವಿ. ವಿಜಯನ್, ಮನಯತ್ತ್ ಚಂದ್ರನ್, ಪಿ. ಅಪ್ಪುಕುಟ್ಟನ್, ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಎಂ.ವಿ. ಬಾಲಕೃಷ್ಣನ್ ಮೊದಲಾದವರು ಮಾತನಾಡಿದರು. ರಾಜ್ಯ ಸರಕಾರ ಮಂಜೂರು ಮಾಡಿದ 27.5 ಸೆಂಟ್ ಜಾಗದಲ್ಲಿ 2.25 ಕೋಟಿ ವೆಚ್ಚದಲ್ಲಿ ಈ ತರಬೇತಿ ಕೇಂದ್ರ ಕಟ್ಟಡ ನಿರ್ಮಿಸಲಾಗಿದೆ. ಉದುಮ ಮಾಲೋಂ ಕುನ್ನಿನಲ್ಲಿ ಇಂಡಿಯನ್ ಹೊಟೇಲ್ ಕಂಪೆನಿ ಲಿಮಿಟೆಡ್ (ಐಎಚ್‌ಸಿಎಲ್) ನಿರ್ಮಿಸಿದ ‘ಗೇಟ್‌ವೇ ಬೇಕಲ್’ ಪಂಚನಕ್ಷತ್ರ ರೆಸೋರ್ಟ್‌ನ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿರ್ವಹಿಸಿದರು. ಮಾತ್ರವಲ್ಲ ಚೀಮೇನಿಯಲ್ಲಿ  ನೂತನವಾಗಿ ನಿರ್ಮಿಸಿದ ಹುತಾತ್ಮ ಸ್ಮಾರಕ ಮಂದಿರ ಹಾಗೂ ಹೊಸದುರ್ಗ ಕುಟ್ಯಾಡಿಯಲ್ಲಿ ಎಕೆಜಿ ಮಂದಿರದ ಉದ್ಘಾಟನೆಯನ್ನು ಅವರು ನೆರವೇಹಿಸಿದರು.

Leave a Reply

Your email address will not be published. Required fields are marked *

You cannot copy content of this page