ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ
ಕಾಸರಗೋಡು: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಮುಖವಾಡ ಧರಿಸಿ ಬಂದ ವ್ಯಕ್ತಿಯೋರ್ವ ಇರಿದು ಗಾಯಗೊಳಿಸಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಇಲ್ಲಿನ ಚಾಯಿತ್ತೋಡ್‌ನ ಶೈಬನ್ (14) ಎಂಬ ವಿದ್ಯಾರ್ಥಿ ನಿನ್ನೆ ಬೆಳಿಗ್ಗೆ ಮನೆ ಯಿಂದ ಶಾಲೆಗೆ ಹೋಗುತ್ತಿದ್ದ ವೇಳೆ ನಡೆ ದಾರಿಯಲ್ಲಿ ಅಕ್ರಮಿಯೋರ್ವ ಮುಸುಕುದಾರಿಯಾಗಿ ಬಂದು ಚಾಕುವಿನಿಂದ ಇರಿದನೆಂದೂ, ಆಗ ಅದನ್ನು ತಡೆದ ಬಾಲಕನ ಕೈಗೆ ಗಾಯ ವುಂಟಾಗಿ ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.