ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಅಣಂಗೂರಿನ 2ರ ಬಾಲಕಿ

ಕಾಸರಗೋಡು: ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದು ಅಣಂಗೂರು ನಿವಾಸಿ 2 ವರ್ಷದ ಬಾಲಕಿ ಹೆಮ್ಮೆ ತಂದಿದ್ದಾಳೆ. ಕಾಸರ ಗೋಡು ಕೊಹಿನೂರು ಟ್ರಾವಲ್ಸ್‌ನ ಯೂಸಫ್‌ಅಸ್ಫಾಕ್ ಹಾಗೂ ನೆಲ್ಲಿಕುಂಜೆ ನೌರಿನ್ ಶಮ್ನಾಸ್ ದಂಪತಿ ಪುತ್ರಿಯಾದ ಮರ್‌ಯಂ ಅಮಾನಿ ಅಸ್ಫಾಕ್ ಈ ಸಾಧನೆ ಮಾಡಿದ್ದಾಳೆ. 3 ಇಂಗ್ಲೀಷ್ ಪದ್ಯಗಳು ಹಾಗೂ ಇಂಗ್ಲೀಷ್ ಅಕ್ಷರ ಮಾಲೆ, ಶರೀರದ 14 ಭಾಗಗಳು, ಜಲಜಂತುಗಳು, ಸಾಕುಮೃಗಗಳು, ಕಾಡು ಪ್ರಾಣಿಗಳು, ಆಹಾರ ವಸ್ತುಗಳು, ಬಣ್ಣಗಳು, ಪ್ರಾಣಿಗಳು, ಕಾರ್ಟೂನ್ ಕಥಾ ಪಾತ್ರಗಳು ಸಹಿತ 160 ಚಿತ್ರಗಳನ್ನು ನಾಲ್ಕು ನಿಮಿಷದಲ್ಲಿ ಗುರುತು ಹಿಡಿದು ಈಕೆ ದಾಖಲೆ ಮಾಡಿದ್ದಾಳೆ.

You cannot copy contents of this page